ನವದೆಹಲಿ: ಯಾವುದೇ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಕಮಾಂಡೆಂಟ್ ಮಟ್ಟದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್)ನ ಎಲ್ಲಾ ಸಿಬ್ಬಂದಿಗೆ ಪಡಿತರ ಹಣ ಭತ್ಯೆ (Ration Money Allowance) ನೀಡುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಗುರುವಾರ ಪ್ರಕಟಿಸಿದೆ.
“ದೆಹಲಿ ಹೈಕೋರ್ಟ್ 2019 ರ ಏಪ್ರಿಲ್ 10ರಂದು ನೀಡಿರುವ ಆದೇಶಗಳನ್ನು ಅನುಷ್ಠಾನಗೊಳಿಸುವ ಸಿಆರ್ಪಿಎಫ್ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ಪುರಸ್ಕರಿಸಿದೆ. ಸಿಬ್ಬಂದಿ ಯಾವ ಸ್ಥಳದಲ್ಲಿ ನಿಯೋಜನೆಗೊಂಡಿದ್ದಾರೆ ಎಂಬುದನ್ನು ಲೆಕ್ಕಿಸದೆಯೇ ಕಮಾಂಡೆಂಟ್ ಹುದ್ದೆಯವರೆಗೆ ಪಡಿತರ ಹಣ ಭತ್ಯೆ ನೀಡುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ. ಸಚಿವಾಲಯವು ಹಣಕಾಸು ಸಚಿವಾಲಯದೊಂದಿಗೆಸಮಾಲೋಚನೆ ನಡೆಸಿ ಸಮ್ಮತಿಯನ್ನು ನೀಡಿದೆ” ಎಂದು ಅಕ್ಟೋಬರ್ 17ರಂದು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದೆ ಆದೇಶ ಹೇಳಿದೆ.
ದೆಹಲಿ ಹೈಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಸಚಿವಾಲಯವು ಸಿಆರ್ಪಿಎಫ್ ಕಮಾಂಡೆಂಟ್ ಹುದ್ದೆಯವರೆಗಿನ ಎಲ್ಲಾ ಸಿಬ್ಬಂದಿಗಳಿಗೂ ಅವರು ಯಾವ ಪ್ರದೇಶದಲ್ಲಿ ನಿಯೋಜಿತರಾಗಿದ್ದಾರೆ ಎಂಬುದನ್ನು ಲೆಕ್ಕಿಸದೆ ಪಡಿತರ ಹಣ ಭತ್ಯೆ ನೀಡುವಂತೆ ನಿರ್ದೇಶನಗಳನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.