ಶ್ರೀನಗರ: ಉದ್ವಿಗ್ನ ಕಾಶ್ಮೀರ ಕಣಿವೆ ಸಹಜ ಸ್ಥಿತಿಯತ್ತ ಮರಳುತ್ತಿದೆ, ಶ್ರೀನಗರದ ಪ್ರಾದೇಶಿಕ ಸೇನಾ ಬಟಾಲಿಯನ್ಗಾಗಿ ನಡೆಸಿದ ನಾಲ್ಕು ದಿನಗಳ ಸುದೀರ್ಘ ನೇಮಕಾತಿ ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ 6,500 ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
6,500ಕ್ಕೂ ಹೆಚ್ಚು ಯುವಕರು ಮಂಗಳವಾರ ಕೊನೆಗೊಂಡ ನಾಲ್ಕು ದಿನಗಳ ಸುದೀರ್ಘ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ದೈಹಿಕ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇದರಲ್ಲಿ ಒಟ್ಟು 550 ಜನರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರು ಲಿಖಿತ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ, ಅದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು 162 ಇನ್ಫಾಂಟ್ರಿ ಬಟಾಲಿಯನ್ಗೆ ಸೇರಿಸಲಾಗುತ್ತದೆ.
ಈ ಬಗ್ಗೆ ಮಾಹಿತಿಯನ್ನು ನೀಡಿದ ಕಮಾಂಡಿಂಗ್ ಆಫೀಸರ್ ಆರ್.ಆರ್.ಶರ್ಮಾ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅನೇಕರು ಅನಂತ್ನಾಗ್, ಪುಲ್ವಾಮಾ ಮತ್ತು ಶೋಪಿಯಾನ್ ಮುಂತಾದ ಪ್ರದೇಶಗಳಿಂದ ಬಂದವರು. ಇದು ಹಿಂಸೆ ಪೀಡಿತ ದಕ್ಷಿಣ ಕಾಶ್ಮೀರ ಪ್ರದೇಶದ ಯುವಜನರಲ್ಲಿ ಭಾರತೀಯ ಸೇನೆಗೆ ಸೇರುವ ಉತ್ಸಾಹವನ್ನು ತೋರಿಸುತ್ತದೆ ಎಂದಿದ್ದಾರೆ.
ನೇಮಕಾತಿಯಲ್ಲಿ ಭಾಗವಹಿಸಿದವರಲ್ಲಿ ಒಬ್ಬರು ಮಾತನಾಡಿ, “ಪ್ರಕ್ರಿಯೆ ತುಂಬಾ ಒಳ್ಳೆಯದು. ಭಾರತೀಯ ಸೇನೆಯು ಅತ್ಯಂತ ಶಿಸ್ತುಬದ್ಧ ಪಡೆಯಾಗಿದೆ. ರಾಷ್ಟ್ರದ ಸೇವೆ ಮಾಡಲು ನಾನು ಇಲ್ಲಿದ್ದೇನೆ” ಎಂದು ಹೇಳಿದ್ದಾರೆ.
ಮತ್ತೊಬ್ಬರು ಮಾತನಾಡಿ, “ನಾನು ದೇಶವನ್ನು ರಕ್ಷಿಸಲು ಬಯಸುತ್ತೇನೆ, ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ. ಹೆಚ್ಚಿನ ಯುವಕರು ಪ್ರಕ್ರಿಯೆಯಲ್ಲಿ ಭಾಗವಹಿಸಿ ಸೈನ್ಯಕ್ಕೆ ಸೇರಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.