ನವದೆಹಲಿ: ಪ್ರೀ ಸ್ಕೂಲ್ ಮಕ್ಕಳಿಗೆ ಮೌಖಿಕ ಅಥವಾ ಲಿಖಿತ ಪರೀಕ್ಷೆಗಳನ್ನು ನಡೆಸಬಾರದು ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (NCERT) ಆದೇಶಿಸಿದೆ. ಪುಟಾಣಿ ಮಕ್ಕಳಿಗೆ ಪರೀಕ್ಷೆಯನ್ನು ನಡೆಸುವುದು ಹಾನಿಕಾರಕ ಅಭ್ಯಾಸವಾಗಿದ್ದು, ತಪ್ಪುತಿಳುವಳಿಕೆಯ ಪೋಷಕರ ಆಕಾಂಕ್ಷೆಗಳಿಂದ ಉಂಟಾದ ಅನಪೇಕ್ಷಿತ ಅಭ್ಯಾಸ ಎಂದಿದೆ.
ಅಲ್ಲದೇ ಪ್ರೀ ಸ್ಕೂಲ್ ಹಂತದಲ್ಲಿ ಪಾಸ್ ಅಥವಾ ಫೇಲ್ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆಯುವಂತಿಲ್ಲ. ಮಗುವು ಯಾವುದೇ ರೀತಿಯ ಮೌಖಿಕ ಅಥವಾ ಲಿಖಿತ ಪರೀಕ್ಷೆಯನ್ನು ತೆಗೆದುಕೊಳ್ಳವಂತೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ದೇಶದಾದ್ಯಂತ ಇತ್ತೀಚಿಗೆ ನಡೆಯುತ್ತಿರುವ ಪ್ರೀ ಸ್ಕೂಲ್ ಕಾರ್ಯಕ್ರಮಗಳು ಮಕ್ಕಳನ್ನು ಚಟುವಟಿಕೆ ಹೀನರಾಗಿ ಮಾಡುತ್ತಿದೆ. ಅವರ ಮೇಲೆ ಹೊರೆ ಹೊರಿಸುತ್ತಿದೆ. ಹೋಂ ವರ್ಕ್ಗಳನ್ನು ನೀಡಿ ಮಕ್ಕಳ ಬಾಲ್ಯವನ್ನು, ಆಟವನ್ನು ಕಸಿದುಕೊಳ್ಳುತ್ತಿದೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆಯಾಗಿದ್ದು, ಮಗುವಿನ ಭವಿಷ್ಯಕ್ಕೆ ಮಾರಕವಾಗಿದೆ. ಪೋಷಕರ ಅನಪೇಕ್ಷಿತ ಆಕಾಂಕ್ಷೆಗಳಿಂದ ಇದು ಹುಟ್ಟಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರೀ ಸ್ಕೂಲ್ ಶಿಕ್ಷಣಕ್ಕಾಗಿನ ತನ್ನ ಮಾರ್ಗಸೂಚಿಯ ಭಾಗವಾಗಿ ಎನ್ಸಿಇಆರ್ಟಿಯು, ಪ್ರೀ ಸ್ಕೂಲ್ಗಳಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು, ಹೇಗೆ ಮೌಲ್ಯಮಾಪನ ಮಾಡಬೇಕು ಎಂಬ ಅಂಶಗಳನ್ನು ಪಟ್ಟಿ ಮಾಡಿದೆ. ಪ್ರತಿ ಮಗುವಿನ ಪ್ರಗತಿಯನ್ನು ಇತರ ಮಕ್ಕಳೊಂದಿಗೆ ಸಂವಹನ ಸೇರಿದಂತೆ ಇತರ ಪರಿಕರ ಮತ್ತು ತಂತ್ರಗಳನ್ನು ಬಳಸಿಕೊಂಡು ನಡೆಸಬೇಕು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.