ನವದೆಹಲಿ: ದೇಶಕಂಡ ಮಹಾನ್ ವಿಜ್ಞಾನಿ, ಕ್ಷಿಪಣಿ ಪುರುಷ, ಹೆಮ್ಮೆಯ ಶಿಕ್ಷಕ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮಹಾನ್ ವ್ಯಕ್ತಿತ್ವಕ್ಕೆ ನಮನಗಳನ್ನು ಸಲ್ಲಿಕೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ, “ಡಾ.ಎಪಿಜೆ ಅಬ್ದುಲ್ ಕಲಾಂ ಜಯಂತಿಯ ಅಂಗವಾಗಿ ಅವರಿಗೆ ವಿನಂಬ್ರ ಶ್ರದ್ಧಾಂಜಲಿಗಳು. 21ನೇ ಶತಮಾನದ ಸಮಕ್ಷ ಮತ್ತು ಸಮರ್ಥ ಭಾರತದ ಕನಸನ್ನು ಅವರು ಕಂಡರು ಮತ್ತು ದೇಶಕ್ಕಾಗಿ ವಿಶಿಷ್ಟ ಕೊಡುಗೆಯನ್ನು ನೀಡಿದರು. ಅವರ ಆದರ್ಶ ಜೀವನ ದೇಶವಾಸಿಗಳಿಗೆ ಸದಾ ಪ್ರೇರಣೆ” ಎಂದಿದ್ದಾರೆ. ಅಲ್ಲದೇ ಕಲಾಂ ಅವರ ಜೀವನಕ್ಕೆ ಸಂಬಂಧಿಸಿದಂತೆ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ 1931 ರ ಅಕ್ಟೋಬರ್ 15 ರಂದು ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಜನಿಸಿದ್ದರು. ಭಾರತದ ಅಣುಬಾಂಬ್ ಪರೀಕ್ಷೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು. ಕ್ಷಿಪಣಿ ಪುರುಷ ಎಂದು ಕರೆಸಿಕೊಂಡರು. ದೇಶದ 11ನೇ ರಾಷ್ಟ್ರಪತಿಯಾಗಿ ಜನರ ರಾಷ್ಟ್ರಪತಿ ಎನಿಸಿಕೊಂಡರು. ಶಿಲಾಂಗ್ನ ಐಐಎಂನಲ್ಲಿ ಭಾಷಣ ಮಾಡುತ್ತಿರುವಾಗ ಹೃದಯಾಘಾತವಾಗಿ 2015 ರ ಜುಲೈ 27 ರಂದು ಇಹಲೋಕ ತ್ಯಜಿಸಿದ್ದರು.
ಕಲಾಂ ಅವರೊಬ್ಬ ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ರಾಷ್ಟ್ರಪತಿ. ಅವರೊಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಸರಳವಾಗಿ ಬದುಕಿದರು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬುದು ಅವರ ಬದುಕಿನ ಸಂದೇಶವಾಗಿತ್ತು. ದೇಶ ಮೊದಲು, ಅನಂತರ ನಾವೆಲ್ಲ ಎಂಬುದು ಅವರ ಬದುಕಿನ ಮಂತ್ರವಾಗಿತ್ತು. ‘ಮಾ ತುಝೆ ಸಲಾಂ’ ಎಂದು ಭಾರತಮಾತೆಯ ಅಡಿದಾವರೆಗಳಿಗೆ ತಮ್ಮ ಬುದ್ಧಿ, ಶಕ್ತಿ, ಸಾಮರ್ಥ್ಯ, ಪ್ರತಿಭೆ ಎಲ್ಲವನ್ನು ಕಲಾಂ ಅರ್ಪಿಸಿದ್ದರು. ಅವರ ಬದುಕೇ ಒಂದು ಸಂದೇಶ, ಒಂದು ಮೇಲ್ಪಂಕ್ತಿ. ನಾವದನ್ನು ಪ್ರಾಮಾಣಿಕವಾಗಿ ಅನುಸರಿಸಬೇಕಷ್ಟೆ.
डॉ. एपीजे अब्दुल कलाम जी को उनकी जयंती पर विनम्र श्रद्धांजलि। उन्होंने 21वीं सदी के सक्षम और समर्थ भारत का सपना देखा और इस दिशा में अपना विशिष्ट योगदान दिया। उनका आदर्श जीवन देशवासियों को सदैव प्रेरित करता रहेगा।
India salutes Dr. APJ Abdul Kalam Ji on his Jayanti. pic.twitter.com/PPgPrkqQRG
— Narendra Modi (@narendramodi) October 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.