ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ ಫೋರ್ಬ್ಸ್ ಇಂಡಿಯಾ 2019 ಪಟ್ಟಿಯಲ್ಲಿ ದೇಶದ ನಂಬರ್.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬರೋಬ್ಬರಿ 12ನೇ ಬಾರಿಗೆ ಯುಎಸ್ಡಿ 51.4 ಬಿಲಿಯನ್ ಆಸ್ತಿಯೊಂದಿಗೆ ಅಂಬಾನಿಯವರು ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
“ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯ ಕೇವಲ ಮೂರು ವರ್ಷಗಳ ಟೆಲಿಕಾಂ ಘಟಕ ಜಿಯೋ 340 ಮಿಲಿಯನ್ ಗ್ರಾಹಕರೊಂದಿಗೆ ಭಾರತದ ಅತಿ ದೊಡ್ಡ ಮೊಬೈಲ್ ಕ್ಯಾರಿಯರ್ ಆಗುವ ಮೂಲಕ ಮುಖೇಶ್ ಅಂಬಾನಿಯವರ ಯುಎಸ್ಡಿ4.1 ಬಿಲಿಯನ್ ಅನ್ನು ಈ ವರ್ಷ ತಮ್ಮ ಆಸ್ತಿಗೆ ಸೇರ್ಪಡೆಗೊಳಿಸಿದ್ದಾರೆ” ಎಂದು ಅಮೆರಿಕದ ಬಿಸಿನೆಸ್ ಮ್ಯಾಗಜೀನ್ ಹೇಳಿದೆ.
ಪಟ್ಟಿಯಲ್ಲಿ ಭಾರತದ ಇತರ ಉದ್ಯಮಿಗಳಾದ ಗೌತಮ್ ಅದಾನಿ, ಹಿಂದುಜಾ ಬ್ರದರ್ಸ್, ಪಲ್ಲೊಂಜಿ ಮಿಸ್ತ್ರಿ, ಬ್ಯಾಂಕರ್ ಉದಯ ಕೋಟಕ್ ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೂಲಸೌಕರ್ಯ ದಿಗ್ಗಜ ಗೌತಮ್ ಅದಾನಿ ಅವರು USD 15.7 ಮಿಲಿಯನ್ ಆದಾಯದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನವನ್ನು ಹಿಂದುಜಾ ಬ್ರದರ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಇವರ ಬಳಿ ಇರುವ ಒಟ್ಟು ಆದಾಯ USD 15.6 ಬಿಲಿಯನ್.
ನಾಲ್ಕನೇ ಸ್ಥಾನವನ್ನು ಪಲ್ಲೊಂಜಿ ಮಿಸ್ತ್ರಿ ತಮ್ಮದಾಗಿಸಿಕೊಂಡಿದ್ದಾರೆ. ಇವರ ಬಳಿ ಇರುವ ಆದಾಯ ಯುಎಸ್ಡಿ 15 ಬಿಲಿಯನ್. ಉದಯ್ ಕೋಟಕ್ ಅವರು ಐದನೇ ಸ್ಥಾನವನ್ನು ಪಡೆದು ಕೊಂಡಿದ್ದು, ಇವರ ಬಳಿ ಇರುವ ಒಟ್ಟು ಆದಾಯ ಯುಎಸ್ ಡಿ 14.8 ಬಿಲಿಯನ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.