ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಇಂದು ಭೇಟಿ ಕೊಡಲಿರುವ ತಮಿಳುನಾಡಿನ ಮಹಾಬಲಿಪುರಂ ಅತ್ಯದ್ಭುತವಾದ ರೀತಿಯಲ್ಲಿ ಅಲಂಕೃತವಾಗಿದೆ. ‘ಪಂಚ ರಥ’ ಸಮೀಪ ತೋಟಗಾರಿಕೆ ಇಲಾಖೆಯು ಮಹಾ ದ್ವಾರವೊಂದನ್ನು ನಿರ್ಮಾಣ ಮಾಡಿದ್ದು, ಇದರ ಅಲಂಕಾರಕ್ಕಾಗಿ 18 ವಿಧದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಬಳಕೆ ಮಾಡಲಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಈ ತರಕಾರಿ ಮತ್ತು ಹಣ್ಣುಗಳನ್ನು ತಂದಿರುವುದು ಗಮನಾರ್ಹ. ಅಲ್ಲದೇ ಇವುಗಳು ಸಂಪೂರ್ಣ ಸಾವಯವ ಮಾದರಿಯಲ್ಲಿ ಬೆಳೆಸಲಾದ ತರಕಾರಿಗಳು ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಮೋದಿ ಮತ್ತು ಕ್ಸಿ ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಲಾಗುವ ಕಡಲ ತೀರದಲ್ಲಿನ ದೇಗುಲದ ಸಮೀಪ ಸಾಂಪ್ರದಾಯಿಕವಾಗಿ ಬಾಳೆ ಗಿಡಗಳನ್ನು ಜೋಡಿಸಲಾಗಿದೆ.
ಭಾರತ ಮತ್ತು ಚೀನಾದ ನಡುವಣ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗಿಯಾಗಲು ಕ್ಸಿ ತಮಿಳುನಾಡಿಗೆ ಆಗಮಿಸುತ್ತಿದ್ದಾರೆ.
ಕ್ಸಿ ಅವರಿಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಪಾಲಿಟ್ ಬ್ಯುರೊ ಸದಸ್ಯರು ಸಾಥ್ ನೀಡಲಿದ್ದಾರೆ. ಭಾರತದ ಕಡೆಯಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪ್ರಧಾನ ಮಂತ್ರಿಗೆ ಸಾಥ್ ನೀಡಲಿದ್ದಾರೆ.
ಮಾಮಲ್ಲಪುರಂ ಸಾಮಾನ್ಯವಾಗಿ ಮಹಾಬಲಿಪುರಂ ಎಂದು ಕರೆಯಲಾಗುವ ಈ ಸ್ಥಳವು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಈ ಇತಿಹಾಸವು ಚೀನಾ ಸಂಪರ್ಕವನ್ನೂ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.