ನವದೆಹಲಿ: ಭಾರತೀಯ ಜನಸಂಘದ ಹಿರಿಯ ನಾಯಕ, ಆರ್ಎಸ್ಎಸ್ನ ಹಿರಿಯ ಪ್ರಚಾರಕರೂ ಆಗಿದ್ದ ಭಾರತ ರತ್ನ ದಿವಂಗತ ನಾನಾಜಿ ದೇಶಮುಖ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಮಹಾನ್ ಸಾಮಾಜಿಕ ಕಾರ್ಯಕರ್ತ ಮತ್ತು ರಾಷ್ಟ್ರ ಸೇವಕ ನಾನಾಜಿ ದೇಶ್ಮುಖ್ ಅವರ ಜನ್ಮದಿನದ ಹಿನ್ನಲೆಯಲ್ಲಿ ಕೋಟಿ ಕೋಟಿ ನಮನಗಳು. ಅವರು ಗ್ರಾಮಗಳ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಣೆ ಮಾಡಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಅವರ ಯೋಗದಾನ ದೇಶವಾಸಿಗಳಿಗೆ ಸದಾ ಪ್ರೇರಣೆಯನ್ನು ನೀಡುತ್ತದೆ” ಎಂದಿದ್ದಾರೆ.
महान सामाजिक कार्यकर्ता और राष्ट्रसेवक नानाजी देशमुख को उनकी जयंती पर कोटि-कोटि नमन। उन्होंने गांवों और किसानों के कल्याण के लिए अपना संपूर्ण जीवन समर्पित कर दिया। राष्ट्रनिर्माण में उनका योगदान देशवासियों के लिए सदैव प्रेरणास्रोत बना रहेगा। pic.twitter.com/k0c7Sml2Ds
— Narendra Modi (@narendramodi) October 11, 2019
ಇದರೊಂದಿಗೆ ನಾನಾಜಿ ಅವರಿಗೆ ಸಂಬಂಧಿಸಿದ ವೀಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಚಂಡಿಕಾದಾಸ್ ಅಮೃತರಾವ್ ದೇಶಮುಖ್ ಎಂಬುದು ನಾನಾಜಿ ಅವರ ಪೂರ್ಣ ಹೆಸರು. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ 1916ರ ಅಕ್ಟೋಬರ್ 11 ರಂದು ಇವರು ಜನಿಸಿದರು. ಭಾರತೀಯ ಜನಸಂಘ ಪಕ್ಷ ಮತ್ತು ಆರ್ ಎಸ್ ಎಸ್ ನ ಹಿರಿಯ ನಾಯಕರಾಗಿ ಇವರು ಸಲ್ಲಿಸಿದ ಸೇವೆ ಅಪಾರ. ದೀನದಯಾಳ್ ಸಂಶೋಧನಾ ಕೇಂದ್ರದ ನೇತೃತ್ವ ವಹಿಸಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ, ನೈರ್ಮಲ್ಯ ಮತ್ತು ಗುಡಿಕೈಗಾರಿಕೆಗಳ ಸಬಲೀಕರಣಕ್ಕೆ ಕೊಡುಗೆ ಸಲ್ಲಿಸಿದ್ದರು.
ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ಇವರು ರಾಜ್ಯಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಭಾರತ ಸರಕಾರವು ಇವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮರಣೋತ್ತರ ಭಾರತ ರತ್ನವನ್ನು ನೀಡಿ ಅವರ ಸೇವೆಯನ್ನು ಪುರಸ್ಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.