ನವದೆಹಲಿ: ರಫೆಲ್ RB 001 ಅನ್ನು ಅಕ್ಟೋಬರ್ 2019 ರಂದು ಫ್ರಾನ್ಸಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಧಿಕೃತವಾಗಿ ಸೇರ್ಪಡೆಗೊಳಿಸಿದ್ದಾರೆ. ಇದರ ಬೆನ್ನೆಲ್ಲೇ ಎರಡನೇ RB 002 ರಫೆಲ್ ಯುದ್ಧ ವಿಮಾನ ಹಾರಾಟಕ್ಕೆ ಸಜ್ಜಾಗಿದೆ. ಯುದ್ಧ ವಿಮಾನಗಳ ತಯಾರಕ ಕಂಪನಿ ಡಸಾಲ್ಟ್ ಏವಿಯೇಶನ್ ಬುಧವಾರ ಎರಡನೇಯ ರಫೆಲ್ನ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಡಸಾಲ್ಟ್ ಏವಿಯೇಶನ್ ಬಿಡುಗಡೆ ಮಾಡಿದ ಐದು ಫೋಟೋಗಳು, ಅವಳಿ ಆಸನಗಳನ್ನು ಹೊಂದಿರುವ ರಫೆಲ್ RB 002 ಸಮುದ್ರ, ಅರಣ್ಯ ಪ್ರದೇಶ ಮತ್ತು ತೆರೆದ ಮೈದಾನಗಳ ಮೇಲೆ ಹಾರುತ್ತಿರುವುದನ್ನು ತೋರಿಸುತ್ತದೆ. ವಾಯುಸೇನೆ ಒಟ್ಟು ಎಂಟು ಅವಳಿ ಆಸನಗಳ ರಫೆಲ್ ಟ್ರೈನರ್ಗಳನ್ನು ಪಡೆಯಲಿದೆ, ಉಳಿದ 28 ವಿಮಾನಗಳು ಏಕ ಆಸನದ್ದಾಗಿದೆ.
ರಫೇಲ್ ಟೇಲ್ನಲ್ಲಿರುವ RB ಎಂದರೆ ಈಗಿನ ವಾಯುಸೇನಾ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರ ಇನಿಶಿಯಲ್ ಆಗಿದೆ. ಇವರು ವಾಯುಸೇನೆಯ ಉಪ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ 4 ++ ತಲೆಮಾರಿನ ಫೈಟರ್ಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು.
ವಾಯುಸೇನೆಗೆ ಸೇರುವ ರಫೆಲ್ಗಳನ್ನು ಹೆಚ್ಚು ಶಕ್ತಿಶಾಲಿ ಮತ್ತು ಮಾರಕವಾಗಿಸಲು ಹಲವಾರು ಭಾರತೀಯ ಸಾಧನಗಳೊಂದಿಗೆ ಮಾರ್ಪಡಿಸಲಾಗಿದೆ. ವಾಯುಸೇನೆಯು ರಫೆಲ್ ಜೊತೆಗೆ ಎಂಬಿಡಿಎಯ deadly Meteor Beyond Visual Range Air-to-Air ಮತ್ತು Scalp subsonic cruise missiles ಅನ್ನು ಪಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.