ನವದೆಹಲಿ: ಅಂಡಮಾನ್ ನಿಕೋಬರ್ನ ಅಂಡಮಾನ್ ಹಾಲಿಡೇಸ್ ಎಂಬ ಪ್ರಮುಖ ಡೆಸ್ಟಿನೇಶನ್ ಮ್ಯಾನೇಜ್ಮೆಂಟ್ ಮತ್ತು ಯಾಚ್ ಏಜೆನ್ಸಿ ಪ್ರತಿಷ್ಠಿತ ನ್ಯಾಷನಲ್ ಟೂರಿಸಂ ಅವಾರ್ಡ್ 2017-18ಗೆ ಪಾತ್ರವಾಗಿದೆ. ಭಾರತದ ಮೊದಲ ಯಾಚ್ ಕಾರ್ನಿವಲ್ ‘ಸೈಲ್ ದಿ ಅಂಡಮಾನ್’ ಅನ್ನು 2018 ಮತ್ತು 2019ರಲ್ಲಿ ಅಂಡಮಾನ್ ದ್ವೀಪದಲ್ಲಿ ಆಯೋಜನೆಗೊಳಿಸಿದ್ದಕ್ಕಾಗಿ ಈ ಅವಾರ್ಡ್ ಅನ್ನು ಪಡೆದುಕೊಂಡಿದೆ.
ಅಂಡಮಾನ್ ಯಾಚ್ ಕಾರ್ನಿವಲ್ ಅತ್ಯಂತ ನಾವೀನ್ಯ ಮತ್ತು ವಿಭಿನ್ನ ಪ್ರವಾಸೋದ್ಯಮ ವಿಷಯ ಎಂದು ಅವಾರ್ಡ್ ಪರಿಗಣಿಸಿದೆ.
ಪ್ರವಾಸೋದ್ಯಮ ಸಚಿವಾಲಯದ ಸಹಕಾರದೊಂದಿಗೆ ಅಂಡಮಾನ್ ಮತ್ತು ನಿಕೋಬಾರ್ ಆಡಳಿತ, ಪ್ರವಾಸೋದ್ಯಮ ನಿರ್ದೇಶನಾಲಯ, ಬಂದರು ನಿರ್ವಹಣಾ ಮಂಡಳಿ ಮತ್ತು ಅಂಡಮಾನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯು ಕಾರ್ನೀವಲ್ ಅನ್ನು ಆಯೋಜಿಸಿತ್ತು. ಅಂಡಮಾನ್ಗಳನ್ನು ಏಷ್ಯಾ ಪೆಸಿಫಿಕ್ ಪ್ರದೇಶದ ಪ್ರಮುಖ ವಿಹಾರ ತಾಣವಾಗಿ ಮಾಡುವ ಉದ್ದೇಶದಿಂದ ಇದನ್ನು ಆಯೋಜನೆಗೊಳಿಸಲಾಗಿದೆ.
ಈ ಪ್ರಶಸ್ತಿಯನ್ನು ಭಾರತ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜುರಾಬ್ ಪೊಲೊಲಿಕಾಶ್ವಿಲಿ ಅವರ ಸಮ್ಮುಖದಲ್ಲಿ ಪ್ರದಾನ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.