ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಸ್ಕ್ವಾಡ್ರನ್ ನಂ. 51 ಗೆ ಯುನಿಟ್ ಸಿಟಿಯೇಶನ್ ಪ್ರಶಸ್ತಿ ಘೋಷಣೆಯಾಗಿದೆ. ಪಾಕಿಸ್ಥಾನದ ಫೈಟರ್ ಜೆಟ್ಗಳನ್ನು ಯಶಸ್ವಿಯಾಗಿ ಹಿಂದಕ್ಕೆ ಓಡಿಸಿದ್ದಕ್ಕಾಗಿ ಮತ್ತು ಪಾಕಿಸ್ಥಾನದ ಎಫ್ -16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದಕ್ಕಾಗಿ ಸೇನಾ ಮುಖ್ಯಸ್ಥ ಆರ್ ಕೆ ಎಸ್ ಭದೌರಿಯಾ ಅವರು ತಂಡಕ್ಕೆ ನೀಡುವ ವಿಶೇಷ ಪ್ರಶಸ್ತಿಯನ್ನು ಸ್ಕ್ವಾಡ್ರನ್ ನಂ. 51 ಗೆ ನೀಡುತ್ತಿದ್ದಾರೆ.
ಬಾಲಕೋಟ್ ವೈಮಾನಿಕ ದಾಳಿಯ ನಂತರ ಸಂಭವಿಸಿದ ಬೆಳವಣಿಗೆಯಲ್ಲಿ ನಿರ್ಣಾಯಕ ಸಮಯದಲ್ಲಿ ಪ್ರದರ್ಶಿಸಿದ ದಿಟ್ಟತನ ಮತ್ತು ಸಹಾಸಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಕ್ವಾಡ್ರನ್ ನಂ. 51ನ ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಸತೀಶ್ ಪವಾರ್ ಅವರು ಅಕ್ಟೋಬರ್ 8 ರಂದು ಸ್ವೀಕರಿಸಲಿದ್ದಾರೆ.
ಸ್ಕ್ವಾಡ್ರನ್ ನಂ 51 ಜೊತೆಗೆ, ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರ 601 ಸಿಗ್ನಲ್ ಯುನಿಟ್ ಫೆಬ್ರವರಿ 26 ರಂದು ಬಾಲಕೋಟ್ ವೈಮಾನಿಕ ದಾಳಿಯ ವೇಳೆ ವಹಿಸಿದ ಪಾತ್ರಕ್ಕಾಗಿ ಗೌರವವನ್ನು ಪಡೆಯಲಿದೆ.
ಅಲ್ಲದೆ, ಸ್ಕ್ವಾಡ್ರನ್ ನಂ 9 ಅನ್ನು ಗೌರವಿಸಲಾಗುತ್ತಿದೆ. ಮಿರಾಜ್ 2000 ಫೈಟರ್ ಜೆಟ್ಗಳ ಮೂಲಕ ಐತಿಹಾಸಿಕ ಬಾಲಕೋಟ್ ವೈಮಾನಿಕ ದಾಳಿಯನ್ನು ಇದರ ಪೈಲಟ್ಗಳು ನಡೆಸಿದ್ದರು. ‘ಆಪರೇಷನ್ ಬಂದರ್’ ಎಂದು ಹೆಸರಿಸಲಾದ ಈ ಕಾರ್ಯಾಚರಣೆಯಲ್ಲಿ ಭಾರತೀಯ ಯುದ್ಧವಿಮಾನಗಳು ಹಲವಾರು ದಶಕಗಳ ನಂತರ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ಥಾನದ ಭೂಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.