ನವದೆಹಲಿ: ಪಾಕಿಸ್ಥಾನದೊಂದಿಗಿನ ಪಶ್ಚಿಮ ಭಾಗದಿಂದ ಎದುರಾಗುವ ಸುಧಾರಿತ ಶತ್ರು ಟ್ಯಾಂಕ್ಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಭಾರತೀಯ ಇನ್ಫಾಂಟ್ರಿ ಯೋಧರು ಹೊಸ ಆಯುಧವನ್ನು ಪಡೆದುಕೊಂಡಿದ್ದಾರೆ. ಸೇನೆಯು ಸೀಮಿತ ಸಂಖ್ಯೆಯ ಇಸ್ರೇಲಿ ಸ್ಪೈಕ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ಅನ್ನು ಸೇರ್ಪಡೆಗೊಳಿಸಲು ಪ್ರಾರಂಭಿಸಿದೆ. ಆರ್ಡಿಒ ಅಭಿವೃದ್ಧಿಪಡಿಸುತ್ತಿರುವ ದೇಶೀಯ ಮ್ಯಾನ್-ಪೋರ್ಟಬಲ್ “ಟ್ಯಾಂಕ್ ಕಿಲ್ಲರ್” ಗಳು ಬಳಕೆಗೆ ಸಿದ್ಧವಾಗುವವರೆಗೆ ತ್ವರಿತ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸಲು ಇದನ್ನು ಸೇನೆಯು ಬಳಸಿಕೊಳ್ಳಲಿದೆ.
ಸೇನೆಯ ಉಪ ಮುಖ್ಯಸ್ಥರ ತುರ್ತು ಖರೀದಿ ಅಧಿಕಾರದ ಭಾಗವಾಗಿ ಸುಮಾರು 10 ದಿನಗಳ ಹಿಂದೆ 210 ಸ್ಪೈಕ್ ಮಿಸೈಲ್ಗಳ “ಫಸ್ಟ್ ಲಾಟ್” ಒಂದು ಡಜನ್ ಲಾಂಚರ್ಗಳೊಂದಿಗೆ ಭಾರತಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ಥಾನದೊಂದಿಗೆ ಬಿಕ್ಕಟ್ಟು ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಇದನ್ನು ತ್ವರಿತವಾಗಿ ಭಾರತಕ್ಕೆ ತರಲಾಗಿದೆ.
ಪಾಕಿಸ್ಥಾನದ ಬಾಲಕೋಟ್ನಲ್ಲಿರುವ ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆಯ ದಾಳಿ ನಡೆಸಿದ ತರುವಾಯ ಭಾರತವು, 4 ಕಿ.ಮೀ.ವರೆಗಿನ ಸ್ಟ್ರೈಕ್ ಶ್ರೇಣಿಯನ್ನು ಹೊಂದಿರುವ ಫೈಯರ್ ಆ್ಯಂಡ್ ಫಾರ್ಗೆಟ್ ಸ್ಪೈಕ್ ಎಟಿಜಿಎಂಗಳನ್ನು ಸುಮಾರು 280 ಕೋಟಿ ರೂ.ಗೆ ಖರೀದಿಸಲು ಮುಂದಾಯಿತು.
“ಡಿಆರ್ಡಿಒ ಅಭಿವೃದ್ಧಿಪಡಿಸುತ್ತಿರುವ ಮ್ಯಾನ್-ಪೋರ್ಟಬಲ್ ಎಟಿಜಿಎಂ ಮುಂದಿನ ವರ್ಷದ ವೇಳೆಗೆ ಸಿದ್ಧವಾಗಿಲ್ಲದಿದ್ದರೆ ಆರ್ಡರ್ ಅನ್ನು ಪುನರಾವರ್ತಿಸಲಾಗುತ್ತದೆ. ನಮ್ಮ ನಿರ್ಣಾಯಕ ಕಾರ್ಯಾಚರಣೆಯ ನ್ಯೂನತೆಗಳನ್ನು ಪರಿಹರಿಸುವಲ್ಲಿ ನಾವು ಇನ್ನು ಮುಂದೆ ನಿಧಾನವಹಿಸಲು ಬಯಸುವುದಿಲ್ಲ ” ಎಂದು ಸೇನೆಯ ಮೂಲ ತಿಳಿಸಿದೆ.
ಕಳೆದ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದ ಕರ್ನೂಲ್ ರೇಂಜ್ನಲ್ಲಿ ಈ ಶಸ್ತ್ರಾಸ್ತ್ರ ವ್ಯವಸ್ಥೆಯ ಮೂರು ಯಶಸ್ವಿ ಪ್ರಯೋಗಗಳನ್ನು ಡಿಆರ್ಡಿಒ ನಡೆಸಿದೆ. ತನ್ನ ಎಂಪಿ-ಎಟಿಜಿಎಂ ಅನ್ನು ಬಳಕೆದಾರರ ಪ್ರಯೋಗಗಳಿಗಾಗಿ ನೀಡುವ ಬಗ್ಗೆ ಅದು ಸಾಕಷ್ಟು ವಿಶ್ವಾಸವನ್ನು ಕೂಡ ಹೊಂದಿದೆ.
13 ಲಕ್ಷ ಮಂದಿಯ ಬಲಿಷ್ಠ ಸೇನೆಯು ವಿವಿಧ ರೀತಿಯ ಶಸ್ತ್ರಾಸ್ತ್ರ, ವಾಹನ ಮತ್ತು ಹೆಲಿಕಾಪ್ಟರ್-ಉಡಾವಣಾ ಎಟಿಜಿಎಂಗಳ ಶೇ.50% ಕ್ಕಿಂತ ಹೆಚ್ಚು ಕೊರತೆಯನ್ನು ಅನುಭವಿಸುತ್ತಿದೆ ಎಂಬುದು ಸತ್ಯ. ಬಯಲು ಪ್ರದೇಶಗಳಲ್ಲಿ ಶತ್ರು ಟ್ಯಾಂಕ್ಗಳನ್ನು ತಡೆಯುವುದು ಮತ್ತು ಪಾಕಿಸ್ಥಾನದೊಂದಿಗಿನ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಗಡಿಯಲ್ಲಿ ದೇಶೀಯ ಅಥವಾ ಇಸ್ರೇಲಿ ಮ್ಯಾನ್-ಪೋರ್ಟಬಲ್ “ಟ್ಯಾಂಕ್ ಕಿಲ್ಲರ್ಸ್” ಯಾವುದೇ ಆಗಿರಲಿ ನಿರ್ಣಾಯ ಟ್ಯಾಂಕ್ ನಿರೋಧಕಗಳನ್ನು ಹೊಂದಿರುವುದು ಸೇನೆಗೆ ಅತೀ ಮುಖ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.