ನವದೆಹಲಿ: ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್, ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಶುಕ್ರವಾರ ಬೆಳಿಗ್ಗೆ ನವದೆಹಲಿ ರೈಲ್ವೇ ನಿಲ್ದಾಣದಲ್ಲಿ “ಸರ್ಬತ್ ದ ಭಲ್ಲಾ ಎಕ್ಸ್ಪ್ರೆಸ್’ ರೈಲಿಗೆ ಚಾಲನೆಯನ್ನು ನೀಡಿದ್ದಾರೆ. ಸಿಖ್ಖರ ಪವಿತ್ರ ಸ್ಥಳ ಸುಲ್ತಾನಪುರ್ ಲೋಧಿ ಮೂಲಕ ಹಾದು ಇದು ದೆಹಲಿ ಮತ್ತು ಲೋಹಿಯನ್ ಖಾಸ್ ಅನ್ನು ಸಂಪರ್ಕಿಸಲಿದೆ. ನವದೆಹಲಿ-ಲೂಧಿಯಾನ ಇಂಟರ್ಸಿಟಿ ರೈಲಿಗೆ ಮರುನಾಮಕರಣ ಮಾಡಿ ‘ಸರ್ಬತ್ ದ ಭಲ್ಲಾ ಎಕ್ಸ್ಪ್ರೆಸ್’ ಎಂದು ಹೆಸರಿಸಲಾಗಿದೆ.
550 ನೇ ಪ್ರಕಾಶ್ ಪರ್ಬ್ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಮಾಡಿಕೊಂಡ ಮನವಿಯಂತೆ ರೈಲಿಗೆ ಮರುನಾಮಕರಣವನ್ನು ಮಾಡಲಾಗಿದೆ. “ಸರ್ಬತ್ ದ ಭಲ್ಲಾ ಅಥವಾ ಎಲ್ಲರಿಗೂ ಆಶೀರ್ವಾದ’ ಎಂಬ ಹೆಸರು ಗುರುನಾನಕ್ ದೇವ್ ಅವರ ಬೋಧನೆಗಳ ಸಾರವನ್ನು ರೂಪಿಸುತ್ತದೆ. ರೈಲಿಗೆ ಈ ಹೆಸರನ್ನು ಮರುನಾಮಕರಣ ಮಾಡಿರುವುದು ಅತ್ಯಂತ ಸೂಕ್ತವಾಗಿದೆ” ಎಂದು ಬಾದಲ್ ಹೇಳಿದ್ದಾರೆ.
“ಇದು ಸಿಖ್ಖರಿಗೆ ಒಂದು ಐತಿಹಾಸಿಕ ಕ್ಷಣವಾಗಿದೆ. ರೈಲಿಗೆ ಮರುನಾಮಕರಣ ಮಾಡುವ ನನ್ನ ಕೋರಿಕೆಯನ್ನು ಅಂಗೀಕರಿಸಿದ್ದಕ್ಕಾಗಿ ನಾನು ಪಿಯೂಷ್ ಗೋಯಲ್ ಅವರನ್ನು ಅಭಿನಂದಿಸುತ್ತೇನೆ. ಸುಲ್ತಾನಪುರ ಲೋಧಿಯಲ್ಲಿ ನಾನಕ್ ತಮ್ಮ ಜೀವನದ 14 ವರ್ಷಗಳನ್ನು ಕಳೆದರು ಮತ್ತು ಎಲ್ಲಾ ಸಮುದಾಯಗಳು ಒಂದಾಗಿ ಬಾಳಬೇಕೆಂದು ಕಲಿಸಿದರು. ಹಿಂದೂವೂ ಅಲ್ಲ, ಮುಸ್ಲಿಂ ಅಲ್ಲ ಕೇವಲ ಒಂದು ಓಂಕಾರ ಮಾತ್ರ ಎಂದು ಬೋಧಿಸಿದರು ” ಎಂದು ಬಾದಲ್ ಹೇಳಿದ್ದಾರೆ.
ಸುಲ್ತಾನಪುರ ಲೋಧಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಮತ್ತು 14 ಹೊಸ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯವು 22 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಅವರು ಹೇಳಿದರು. ಏಳು ಪವಿತ್ರ ಸ್ಥಳಗಳಿಗೆ ಪಂಜಾಬ್ನ ವಿವಿಧ ಭಾಗಗಳಿಂದ ಜನರು ರೈಲಿನ ಮೂಲಕ ತೆರಳಬಹುದು ಎಂದಿದ್ದಾರೆ. ಕರ್ತಾರ್ಪುರ ಕಾರಿಡಾರ್ ಉಪಕ್ರಮವನ್ನು ಕೈಗೆತ್ತಿಕೊಂಡ ಮತ್ತು ಸಿಖ್ ಸಮುದಾಯದ 70 ವರ್ಷದ ಕನಸನ್ನು ಈಡೇರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರು ಧನ್ಯವಾದ ಅರ್ಪಿಸಿದರು. ಈ ರೈಲು ನವದೆಹಲಿ ರೈಲ್ವೆ ನಿಲ್ದಾಣದಿಂದ ಶುಕ್ರವಾರ ಬೆಳಿಗ್ಗೆ 6.30 ಕ್ಕೆ ಸಂಚಾರ ಆರಂಭಿಸಲಿದ್ದು, ಮಧ್ಯಾಹ್ನ 2.38 ಕ್ಕೆ ಸುಲ್ತಾನಪುರ ಲೋಧಿ ತಲುಪಲಿದೆ.
ಸಚಿವ ಹರ್ವಷರ್ಧನ್ ಅವರು ಮಾತನಾಡಿ.” ಜನರಿಗೆ ಅನುಕೂಲವಾಗುವಂತೆ ಸರ್ಕಾರವು ಹಲವಾರು ರೈಲುಗಳನ್ನು ಪ್ರಾರಂಭಿಸಿದೆ. ಈ ರೈಲಿನಲ್ಲಿ ಗುರುನಾನಕ್ ಅವರ ಆಶೀರ್ವಾದ ಇರುತ್ತದೆ. ಇದು ಡೆದೆಹಲಿಗರಿಗೆ ಮತ್ತು ದೇಶವಾಸಿಗಳಿಗೆ ಉಡುಗೊರೆಯಾಗಿದೆ. ಅಲ್ಲದೇ, ನವದೆಹಲಿ ನಿಲ್ದಾಣವನ್ನು ವಿಮಾನ ನಿಲ್ದಾಣ, ಮೆಟ್ರೋ ಮತ್ತು ಯಲ್ಲೋ ಲೈನಿಗೆ ಸಂಪರ್ಕಿಸಲು 6 ಮೀಟರ್ ಸ್ಕೈವಾಕ್ ನಿರ್ಮಿಸಲಾಗುತ್ತಿದೆ. ಈ ರೈಲಿನ ಮರುನಾಮಕರಣವು ನಾನಕ್ ತೋರಿಸಿದ ಮಾರ್ಗವನ್ನು ಅನುಸರಿಸುವ ಒಂದು ಉಪಕ್ರಮವಾಗಿದೆ. ನಾವೆಲ್ಲರೂ ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು “ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.