ನವದೆಹಲಿ: ಉತ್ತಮ ಆಡಳಿತ ನಡೆಸುವ ಮತ್ತು ಆಡಳಿತದಲ್ಲಿ ಜನರ ಸಲಹೆ ಸೂಚನೆಗಳನ್ನು ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ MyGov ಆಪ್ನ್ನು ಇದೀಗ ವಿವಿಧ ಭಾಷೆಗಳಲ್ಲಿ ಹೊರತರಲು ಅದರ ನಿರ್ಮಾಣ ಸಂಸ್ಥೆ ಇಂಡಸ್ನೆಟ್ ಟೆಕ್ನಾಲಜೀಸ್ ನಿರ್ಧರಿಸಿದೆ.
ನರೇಂದ್ರ ಮೋದಿ ಸರ್ಕಾರ ಆರಂಭಿಸಿರುವ ಡಿಜಿಟಲ್ ಇಂಡಿಯಾ ವೀಕ್ ಆಂಡ್ರಾಯ್ಡ್ ಆಪ್ ಆಂಗ್ಲ ಭಾಷೆಯಲ್ಲಿ ಇದ್ದು, ನಾಗರಿಕರು ಸರ್ಕಾರದ ನಿರ್ಧಾರಗಳ ಬಗ್ಗೆ ಇಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ.
ಕೋಲ್ಕತಾ ಮೂಲದ ಇಂಡಸ್ನೆಟ್ ಟೆಕ್ನಾಲಜೀಸ್ (ಐಎನ್ಟಿ) ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆಪ್ನ್ನು ಬಿಡುಗಡೆಗೊಳಿಸಿ 1,000ಕ್ಕೂ ಅಧಿಕ ಇನ್ಸ್ಟಾಲೇಷನ್ಗಳನ್ನು ಮಾಡಿದೆ. ಇದರ ವೈಶಿಷ್ಟ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಸಕ್ತ ಹೊಂದಿರುವ ಆಂಗ್ಲ ಭಾಷೆಯೊಂದಿಗೆ ಇನ್ನಿತರ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡುವ ಯೋಜನೆ ಇದೆ ಎಂದು ಐಎನ್ಟಿ ಸಂಸ್ಥಾಪಕ ಸಿಇಒ ಅಭಿಷೇಕ್ ರಂಗ್ತಾ ಹೇಳಿದ್ದಾರೆ.
ಇದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಗಂಗಾ ನೀರು ಶುಚಿತ್ವ, ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ ಸೃಷ್ಠಿ, ಡಿಜಿಟಲ್ ಇಂಡಿಯಾ ಬಗ್ಗೆ ನಾಗರಿಕರ ಅಭಿಪ್ರಾಯ ಪಡೆಯಲಿದೆ. ಮೊಬೈಲ್ ಕ್ಯಾಮೆರಾ ಬಳಸಿ ಕ್ಷಣದಲ್ಲೇ ಫೋನ್ ಗ್ಯಾಲರಿ ಮೂಲಕ ಫೋಟೋಗಳನ್ನು ಲಗತ್ತಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.