ಕಲಬುರ್ಗಿ: ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಕರ್ನಾಟಕ ಕೇಂದ್ರೀಯ ಯೂನಿವರ್ಸಿಟಿಯ ಇಬ್ಬರು ವಿದ್ಯಾರ್ಥಿಗಳು ಸ್ಮಾರ್ಟ್ ಡಸ್ಟ್ಬಿನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಸೆನ್ಸಾರ್ ಆಧಾರಿತ ಡಸ್ಟ್ ಬಿನ್ ಇದಾಗಿದ್ದು, ದೀರ್ಘ ಸಮಯದಿಂದ ಈ ಡಸ್ಟ್ಬಿನ್ನಿಂದ ಕಸ ತೆಗೆಯದೇ ಇದ್ದರೆ ಇದು ಸಂಬಂಧಪಟ್ಟವರಿಗೆ ಸಂದೇಶವನ್ನು ರವಾನಿಸುತ್ತದೆ.
ಸ್ನೇಹ ಮತ್ತು ಅದ್ವೈತ್ ಎಂಬ ಎಲೆಕ್ಟ್ರಿಕ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಡಸ್ಟ್ಬಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ಒಂದು ವರ್ಷ ಶ್ರಮಿಸಿದ್ದಾರೆ. ತುಂಬಿ ತುಳುಕುವ ಕಸದ ಬುಟ್ಟಿಗಳ ಸಮಸ್ಯೆಯನ್ನು ನಿವಾರಣೆಗೊಳಿಸುವ ಸಲುವಾಗಿ ಈ ಸ್ಮಾರ್ಟ್ ಸೆನ್ಸಾರ್ ಆಧಾರಿತ ಡಸ್ಟ್ಬಿನ್ ಅನ್ನು ತಯಾರಿಸಿದ್ದಾರೆ. ಈ ವ್ಯವಸ್ಥೆಯು ಕಸದ ಬುಟ್ಟಿಯಲ್ಲಿ ಎಷ್ಟು ಪ್ರಮಾಣದಲ್ಲಿ ತುಂಬಿದೆ ಎಂಬ ಮಾಹಿತಿಯನ್ನು ರವಾನಿಸುತ್ತಿರುತ್ತದೆ. ಶೀಘ್ರದಲ್ಲೇ ತ್ಯಾಜ್ಯ ತೆಗೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಎಚ್ಚರಿಸುತ್ತದೆ.
“ಡಸ್ಟ್ಬಿನ್ಗಳನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸಲಾಗುತ್ತಿಲ್ಲ ಎಂಬುದನ್ನು ನಾವಿಬ್ಬರೂ ಗಮನಿಸಿದ್ದೇವೆ, ಇದರಿಂದಾಗಿ ಅವುಗಳಲ್ಲಿನ ಕಸಗಳು ಉಕ್ಕಿ ಹರಿಯತ್ತವೆ ಮತ್ತು ಎಲ್ಲೆಡೆ ಚೆಲ್ಲುತ್ತವೆ. ಅಧಿಕಾರಿಗಳಿಗೆ ಇದರ ಬಗ್ಗೆ ನಿಗಾ ಇಡಲು ಸಾಧ್ಯವಾಗುವುದಿಲ್ಲ. ಕೇವಲ ಕಸದ ತೊಟ್ಟಿಗಳನ್ನು ನೀಡುವುದರಿಂದ ಸಮಸ್ಯೆ ನೀಗುವುದಿಲ್ಲ, ಅವುಗಳ ನಿರ್ವಹಣೆಯೂ ಅತೀ ಮುಖ್ಯ. ಸಾಕಷ್ಟು ಸಂಶೋಧನೆಯ ನಂತರ ಸ್ಮಾರ್ಟ್ ಕಸದ ತೊಟ್ಟಿಯ ಈ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಇದನ್ನು ಪೂರ್ಣಗೊಳಿಸಲು ನಮಗೆ ಸಾಕಷ್ಟು ಸಮಯ ಹಿಡಿಯಿತು” ಎಂದು ಸ್ನೇಹಾ ಹೇಳಿದ್ದಾರೆ.
“ಮಾರುಕಟ್ಟೆಯಲ್ಲಿ ಈ ಡಸ್ಟ್ಬಿನ್ನ ಬೆಲೆ ಗಾತ್ರಕ್ಕೆ ಅನುಗುಣವಾಗಿ 500 ರಿಂದ 1000 ರೂ.ಗಳವರೆಗೆ ಇರುತ್ತದೆ. ನಾವು ಕೆಲವು ಸೆನ್ಸಾರ್ಗಳನ್ನು ಇದರಲ್ಲಿ ಬಳಸಿದ್ದೇವೆ, ಅದು ಅಧಿಕಾರಿಗಳಿಗೆ ಸಂದೇಶವನ್ನು ಕಳುಹಿಸುತ್ತದೆ ಮತ್ತು ಡಸ್ಟ್ ಬಿನ್ ಎಲ್ಲಿದೆ ಎಂಬುದನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಸಹಾಯ ಮಾಡಲು ಜಿಪಿಎಸ್ ಮಾಡ್ಯೂಲ್ ಅನ್ನು ಇದರಲ್ಲಿ ಬಳಸಲಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.