ನವದೆಹಲಿ: ನೀತಿ ಆಯೋಗ ಸೋಮವಾರ ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕವನ್ನು (SEQI) ಬಿಡುಗಡೆ ಮಾಡಿದ್ದು, ಇದರಲ್ಲಿ ಶಾಲಾ ಶಿಕ್ಷಣ ಕ್ಷೇತ್ರಗಳಲ್ಲಿ ತಾವು ಮಾಡಿದ ಸಾಧನೆಗಳಿಗೆ ಅನುಗುಣವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಾನ ಪಡೆದಿವೆ.
ಕೇರಳವು 20 ದೊಡ್ಡ ರಾಜ್ಯಗಳಲ್ಲಿ ಪೈಕಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ, ನಂತರದ ಸ್ಥಾನಗಳಲ್ಲಿ ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಗುಜರಾತ್ ಇವೆ. 2016-17ರಲ್ಲಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಉತ್ತರ ಪ್ರದೇಶ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ರಾಜ್ಯಗಳಾಗಿವೆ.
ಈ ವರದಿಗೆ, “ನಮ್ಮ ಶಾಲೆಗಳ ಯಶಸ್ಸು-ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ (SEQI) ಎಂದು ಹೆಸರಿಸಲಾಗಿದೆ ಮತ್ತು ಇದು ಕಲಿಕೆ, ಪ್ರವೇಶ ಮತ್ತು ಇಕ್ವಿಟಿ ಫಲಿತಾಂಶಗಳು, ಮೂಲಸೌಕರ್ಯ ಮತ್ತು ಸೌಲಭ್ಯಗಳ ಆಧಾರದ ಮೇಲೆ ರಾಜ್ಯಗಳಿಗೆ ಸ್ಥಾನವನ್ನು ನೀಡಿದೆ.
ಹರಿಯಾಣ, ಅಸ್ಸಾಂ ಮತ್ತು ಉತ್ತರ ಪ್ರದೇಶವು 2015-16ರ ವರ್ಷಕ್ಕೆ ಹೋಲಿಸಿದರೆ, 2016-17ರಲ್ಲಿ ತಮ್ಮ ಕಾರ್ಯಕ್ಷಮತೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ತೋರಿಸಿದೆ.
ಈ ಸೂಚ್ಯಂಕದೊಂದಿಗೆ, ಸರ್ಕಾರವು ಶಾಲಾ ಶಿಕ್ಷಣದಲ್ಲಿನ ಶಕ್ತಿ ಮತ್ತು ದೌರ್ಬಲ್ಯವನ್ನು ಗುರುತಿಸುತ್ತದೆ ಮತ್ತು ಅವುಗಳನ್ನು ಸರಿಪಡಿಸಲು ನೀತಿ ಮಧ್ಯಸ್ಥಿಕೆಗಳಂತಹ ಅಗತ್ಯ ತಿದ್ದುಪಡಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪ್ರವೇಶ ಮತ್ತು ಇಕ್ವಿಟಿ ಫಲಿತಾಂಶಗಳಲ್ಲಿ ತಮಿಳುನಾಡು ಉನ್ನತ ಸಾಧನೆ ತೋರಿದರೆ, ಕರ್ನಾಟಕವು ಕಲಿಕೆಯ ಫಲಿತಾಂಶಗಳಲ್ಲಿ ಮುನ್ನಡೆ ಸಾಧಿಸಿದೆ. ಹರಿಯಾಣವು ಅತ್ಯುತ್ತಮ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಹೊಂದಿದೆ ಎಂದು ಗುರುತಿಸಲ್ಪಟ್ಟಿದೆ
ಕೇಂದ್ರಾಡಳಿತದಲ್ಲಿ ಚಂಡೀಗಢ ಒಟ್ಟು ಸಾಧನೆಯನ್ನು ಹೆಚ್ಚು ಸ್ಕೋರ್ ಗಳಿಸಿದರೆ, ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದೆ.
ಈ ನಡುವೆ, ಸಣ್ಣ ರಾಜ್ಯಗಳಲ್ಲಿ, ಮಣಿಪುರವು ಅತ್ಯುತ್ತಮ ಪ್ರದರ್ಶನಕಾರರಾಗಿ ಹೊರಹೊಮ್ಮಿದೆ.
ವರದಿಗಳ ಪ್ರಕಾರ ಪಶ್ಚಿಮ ಬಂಗಾಳವನ್ನು ಶ್ರೇಯಾಂಕದಲ್ಲಿ ಸೇರಿಸಲಾಗಿಲ್ಲ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅದು ನಿರಾಕರಿಸಿದೆ.
ಕೇಂದ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್ಆರ್ಡಿ), ವಿಶ್ವಬ್ಯಾಂಕ್ ಮತ್ತು ಶಿಕ್ಷಣ ವಲಯದ ತಜ್ಞರು ಸೇರಿದಂತೆ ಸಹಕಾರಿ ಪ್ರಕ್ರಿಯೆಯ ಮೂಲಕ ಸೂಚ್ಯಂಕವನ್ನು ಅಭಿವೃದ್ಧಿಪಡಿಸಲಾಗಿದೆ, ಗುಣಮಟ್ಟದ ಶಿಕ್ಷಣದ ವಿತರಣೆಯನ್ನು ನಿರ್ಣಯಿಸುವ 30 ನಿರ್ಣಾಯಕ ಸೂಚಕಗಳನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.