ನವದೆಹಲಿ: ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಸೋಮವಾರ ಅಧಿಕಾರವನ್ನು ವಹಿಸಿಕೊಂಡರು.
ಏರ್ ಚೀಫ್ ಮಾರ್ಷಲ್ ಬಿರೆಂದರ್ ಸಿಂಗ್ ಧನೋವಾ ಅವರ ನಿವೃತ್ತಿಯ ಹಿನ್ನಲೆಯಲ್ಲಿ ಭದೌರಿಯಾ ಅವರು ಮುಖ್ಯಸ್ಥ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ನಾಲ್ಕು ದಶಕಗಳ ಕಾಲ ಸೇನೆಗೆ ಸೇವೆಯನ್ನು ಸಲ್ಲಿಸಿರುವ ಧನೋವಾ ಅವರು ಸೇವೆಯಿಂದ ನಿವೃತ್ತರಾದರು.
“ಬಿರೆಂದರ್ ಸಿಂಗ್ ಧನೋವಾ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ನಡೆದ ಸಾಂಪ್ರದಾಯಿಕ ಮಾಲಾರ್ಪಣೆ ಸಮಾರಂಭದೊಂದಿಗೆ ನಿವೃತ್ತರಾದರು. ಆರ್.ಕೆ.ಎಸ್. ಭದೌರಿಯಾ ಇಂದು ವಾಯುಸೇನೆಯ ಹೊಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ” ಎಂದು ಐಎಎಫ್ ವಕ್ತಾರರು ತಿಳಿಸಿದ್ದಾರೆ.
ಏರ್ ಚೀಫ್ ಮಾರ್ಷಲ್ ಭದೌರಿಯಾ ಅವರನ್ನು ಜೂನ್ 1980 ರಲ್ಲಿ ಐಎಎಫ್ನ ಫೈಟರ್ ಸ್ಟ್ರೀಮ್ಗೆ ನಿಯೋಜಿಸಲಾಯಿತು. ಐಎಎಫ್ನ ವಿವಿಧ ವಿಮಾನಗಳನ್ನು ಹಾರಿಸುವ ಪ್ರಾವೀಣ್ಯತೆಯನ್ನು ಅವರು ಪಡೆದುಕೊಂಡಿದ್ದಾರೆ. ಅಲ್ಲದೇ ಅವರು, ಎಕ್ಸ್ಪರಿಮೆಂಟಲ್ ಟೆಸ್ಟ್ ಪೈಲಟ್, ಕ್ಯಾಟ್ ‘ಎ’ ಅರ್ಹತೆ ಪಡೆದ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಮತ್ತು ಪೈಲಟ್ ಅಟ್ಯಾಕ್ ಇನ್ಸ್ಟ್ರಕ್ಟರ್ ಆಗಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಅವರು, ಅಲ್ಲಿ ಅರ್ಹತೆಯ ಒಟ್ಟಾರೆ ಕ್ರಮದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ‘ಸ್ವೋರ್ಡ್ ಆಫ್ ಹಾನರ್’ ಗೆದ್ದುಕೊಂಡಿದ್ದರು. ಅವರನ್ನು 1980ರ ಜೂನ್ ತಿಂಗಳಿನಲ್ಲಿ ಐಎಎಫ್ನ ಫೈಟರ್ ಸ್ಟ್ರೀಮ್ಗೆ ನಿಯೋಜಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.