ಮಾವ್: ತರಕಾರಿ ವ್ಯಾಪಾರಿಯೊಬ್ಬರ ಮಗನನ್ನು ಬಿಜೆಪಿಯು ಉತ್ತರಪ್ರದೇಶದ ಘೋಷಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿಸಿದೆ. ಪಕ್ಷದ ನಿರ್ಧಾರಕ್ಕೆ ಭಾರೀ ಶ್ಲಾಘನೆಗಳು ವ್ಯಕ್ತವಾಗುತ್ತಿದೆ.
ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ವಿಜಯ್ ರಾಜ್ಬರ್ ಎಂಬುವವರು ಇದೀಗ ಪಕ್ಷದ ಟಿಕೆಟ್ ಪಡೆದು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಮಗನ ಸಾಧನೆಯನ್ನು ಅವರ ತಂದೆ ನಂದಲಾಲ್ ರಾಜ್ಬರ್ ಅವರು ಕೊಂಡಾಡಿದ್ದಾರೆ.
“ನಾನು ತರಕಾರಿ ಮಾರುತ್ತೇನೆ. ನನ್ನ ಮಗ ಪಟ್ಟ ಶ್ರಮ ಇಂದು ಫಲ ನೀಡಿದೆ. ಆತನ ಸಾಮರ್ಥ್ಯವನ್ನು ಗಮನಿಸಿ ಪಕ್ಷ ಆತನಿಗೆ ಟಿಕೆಟ್ ನೀಡಿದೆ. ನಿಜಕ್ಕೂ ಸಂತೋಷದ ಭಾವ ನನ್ನಲ್ಲಿ ಮೂಡುತ್ತಿದೆ” ಎಂದು ನಂದ ಲಾಲ್ ಹೇಳಿಕೊಂಡಿದ್ದಾರೆ.
ವಿಜಯ್ ಅವರು ಮಾತನಾಡಿ, “ಪಕ್ಷವು ನನಗೆ ದೊಡ್ಡ ಜವಾಬ್ದಾರಿಯನ್ನು ನೀಡಿದೆ, ಮುನ್ಶಿಪುರದ ಬೀದಿಬದಿಯಲ್ಲಿ ನನ್ನ ತಂದೆ ತರಕಾರಿ ಮಾರುತ್ತಾರೆ. ಅವರ ನಿರೀಕ್ಷೆಗಳನ್ನು ತಲುಪಲು ನಾನು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
ದೇಶದ 13 ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿಯು ಭಾನುವಾರ 32 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 21ರಂದು ಚುನಾವಣೆ ನಡೆಯುತ್ತಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಜಯ್ ಅವರಲ್ಲದೆ, ಬಿಜೆಪಿಯು ಉತ್ತರಪ್ರದೇಶದಿಂದ ಗಂಗೋದಿಂದ ಕಿರಾತ್ ಸಿಂಗ್, ರಾಂಪುರದಿಂದ ಭಾರತ್ ಭೂಷಣ್ ಗುಪ್ತಾ, ಇಗ್ಲಾಸ್ ನಿಂದ ರಾಜ್ಕುಮಾರ್ ಸಹ್ಯೋಗಿ, ಲಕ್ನೋ ಕಂಟೋನ್ಮೆಂಟ್ ನಿಂದ ಸುರೇಶ್ ತಿವಾರಿ, ಗೋವಿಂದನಗರದಿಂದ ಸುರೇಂದ್ರ ಮೈಥಾನಿ, ಮಣಿಕ್ಪುರದಿಂದ ಆನಂದ್ ಶುಕ್ಲಾ, ಝೈದಾಪುರದಿಂದ ಅಂಬರೀಶ್ ರವಾತ್, ಜಬಲ್ಪುರದಿಂದ ರಾಜೇಶ್ ಸಿಂಗ್, ಬಲ್ಹಾದಿಂದ ಸರೋಜ್ ಸೋನ್ಕರ್ ಅವರಿಗೆ ಟಿಕೆಟ್ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.