ನವದೆಹಲಿ: ದಿವಂಗತ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು ನೆರವೇರಿಸಿದ್ದಾರೆ. ಪಾಕಿಸ್ಥಾನದ ಬಂಧನದಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಅವರ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಖ್ಯಾತ ವಕೀಲ ಹರೀಶ್ ಸಾಲ್ವೆ ಅವರನ್ನು ಭೇಟಿಯಾಗಿ ಅವರ ವೇತನ 1.ರೂ ಅನ್ನು ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಈ ವಿಷಯವನ್ನು ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. “ಬನ್ಸುರಿ ಸ್ವರಾಜ್ ಹರೀಶ್ ಸಾಲ್ವೆ ಅವರನ್ನು ಭೇಟಿಯಾಗಿ ಅವರ ರೂ.1 ವೇತನವನ್ನು ಹಸ್ತಾಂತರಿಸಿದ್ದಾರೆ” ಎಂದಿದ್ದಾರೆ.
@sushmaswaraj Bansuri has fulfilled your last wish. She called on Mr.Harish Salve and presented the One Rupee coin that you left as fees for Kulbhushan Jadhav’s case. pic.twitter.com/eyBtyWCSUD
— Governor Swaraj (@governorswaraj) September 27, 2019
ಸುಷ್ಮಾ ಅವರು ಇಹಲೋಕವನ್ನು ತ್ಯಜಿಸುವುದಕ್ಕೂ ತುಸು ಗಂಟೆಗಳ ಮೊದಲು ಆಗಸ್ಟ್ 6ರಂದು ಹರೀಶ್ ಸಾಲ್ವೆ ಅವರಿಗೆ ಫೋನಾಯಿಸಿ, ತನ್ನನ್ನು ಭೇಟಿಯಾಗಿ ಒಂದು ರೂಪಾಯಿ ವೇತನವನ್ನು ಪಡೆದುಕೊಳ್ಳುವಂತೆ ತಿಳಿಸಿದ್ದರು. ಸುಷ್ಮಾ ಮರಣದ ಬಳಿಕ ಈ ವಿಷಯವನ್ನು ಸಾಲ್ವೆ ಹೇಳಿಕೊಂಡಿದ್ದರು.
“ಅವರ ಧ್ವನಿ ಹರ್ಷದಿಂದ ಕೂಡಿತ್ತು ಮತ್ತು ಅವರು ತುಂಬಾ ಸಂತೋಷದಲ್ಲಿದ್ದರು. ನೀವು ಯಾಕೆ ಬಂದು ನನ್ನನ್ನು ಭೇಟಿಯಾಗಿಲ್ಲ ಎಂದು ಅವರು ನನಗೆ ಪ್ರಶ್ನಿಸಿದ್ದರು. ನಾನು ನಿಮಗೆ ಶುಲ್ಕ ಪಾವತಿಸಬೇಕಾಗಿದೆ. ಅದನ್ನು ತೆಗೆದುಕೊಳ್ಳಲು ನೀವು ಬರಬೇಕು ಎಂದು ಅವರು ಹೇಳಿದ್ದರು. ನನಗೆ ಒಂದು ರೂಪಾಯಿಯ ಶುಲ್ಕವನ್ನು ಪಾವತಿಸಲಾಗಿಲ್ಲ ಎಂದು ನೀವು ಎಲ್ಲೋ ಒಂದು ಕಡೆ ಹೇಳಿಕೊಂಡಿದ್ದೀರಿ. ಆದ್ದರಿಂದ ನಾನು ಜಾಧವ್ ಪ್ರಕರಣಕ್ಕೆ ಒಂದು ರೂಪಾಯಿಯನ್ನು ನಿಮಗೆ ನೀಡಬೇಕಾಗಿದೆ. ನಾಳೆ ಬಂದು ನನ್ನನ್ನು ಭೇಟಿಯಾಗಿ ಎಂದು ನನಗೆ ಅವರು ಹೇಳಿದ್ದರು “ಎಂದು ಸುಷ್ಮಾ ಅವರೊಂದಿಗಿನ ಫೋನ್ ಸಂಭಾಷಣೆಯ ಬಗ್ಗೆ ಹರೀಶ್ ಸಾಲ್ವೆ ಹೇಳಿಕೊಂಡಿದ್ದರು.
ಇದೀಗ ಸುಷ್ಮಾ ಅವರ ಕೊನೆಯ ಆಸೆಯನ್ನು ಅವರ ಮಗಳು ಈಡೇರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.