ನವದೆಹಲಿ: ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಪ್ರಗತಿಯು ಏರಿಕೆಯನ್ನು ಕಾಣಲಿದೆ. ಗ್ರಾಹಕ ಬೇಡಿಕೆಯೂ ಉತ್ತಮಗೊಳ್ಳಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಯನ್ ಅವರು ಹೇಳಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳೊಂದಿಗೆ ಮಾತುಕತೆಯನ್ನು ನಡೆಸಿದ ವಾರದ ನಂತರ, ಹಣಕಾಸು ಸಚಿವರು ಖಾಸಗಿ ವಲಯದ ಸಾಲದಾತರು ಮತ್ತು ಹಣಕಾಸು ಸಂಸ್ಥೆಗಳ ಪ್ರಮುಖರೊಡನೆ ಚರ್ಚೆ ನಡೆಸಿದರು. ಬಳಿಕ ಪ್ರತಿಕ್ರಿಯೆಯನ್ನು ನೀಡಿದ ಅವರು, ಸಾಕಷ್ಟು ಸಾಲಕ್ಕಾಗಿ ಬೇಡಿಕೆ ಇರುವುದಾಗಿ ಬ್ಯಾಂಕುಗಳು ತಿಳಿಸಿವೆ ಹಾಗೂ ಲಿಕ್ವಿಡಿಟಿ (ದ್ರವ್ಯತೆ) ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
“ಇಡೀ ಮಾತುಕತೆಯು ಹೆಚ್ಚು ಫಲಪ್ರದವಾಗಿತ್ತು. ಸಕಾರಾತ್ಮಕವಾದ ಮಾತುಗಳನ್ನು ನಾನು ಆಲಿಸಿದೆ. ಖರೀದಿಸುವ ಪ್ರಕ್ರಿಯೆ ಉತ್ತಮವಾಗುತ್ತಿದೆ ಎಂಬ ಸಂದೇಶವನ್ನು ಆಲಿಸಿದೆ. ಸಭೆಯಲ್ಲಿ ಹಾಜರಿದ್ದ ಯಾರೊಬ್ಬರೂ ದ್ರವ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿಲ್ಲ” ಎಂದರು.
ಹಬ್ಬದ ಋತುವಿಗೂ ಮುನ್ನ ಕ್ರೆಡಿಟ್ ಡಿಸ್ಬರ್ಸಲ್ ಹೆಚ್ಚಳಕ್ಕೆ ಸರ್ಕಾರದ ಉತ್ತೇಜನವನ್ನು ಬೆಂಬಲಿಸಲು ಖಾಸಗಿ ಬ್ಯಾಂಕುಗಳು ಸಿದ್ಧ ಇವೆ. 400 ಜಿಲ್ಲೆಗಳಲ್ಲಿ ಸಾಲ ಪಡೆಯುವವರನ್ನು ತಲುಪಲು ಸಾರ್ವಜನಿಕ ವಲಯದ ಬ್ಯಾಂಕುಗಳು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.