ನವದೆಹಲಿ: ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಜಾರಿ ನಿರ್ದೇಶನಾಲಯ ಗುರುವಾರ ದೆಹಲಿ ಹೈಕೋರ್ಟ್ ಅನ್ನು ಕೋರಿದೆ. ಹಣಕಾಸು ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವಾದ್ರಾ ಅವರಿಗೆ ನಿರೀಕ್ಷಣಾ ಜಾಮೀನು ನೀಡದಂತೆಯೂ ಅದು ಮನವಿ ಮಾಡಿಕೊಂಡಿದೆ. ಈ ಬಗೆಗಿನ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 5ಕ್ಕೆ ಮುಂದೂಡಿದೆ.
ವಿಚಾರಣಾಧೀನ ನ್ಯಾಯಾಲಯವು ಕೆಲವು ಸತ್ಯಗಳನ್ನು ಪರಿಗಣಿಸಿಲ್ಲ, ಅಲ್ಲದೇ, ವಾದ್ರ ಅವರು ವಿದೇಶದಲ್ಲಿದ್ದ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನನ್ನು ವಿಚಾರಿಸಲಾಗಿದೆ ಎಂದು ಇಡಿ ಪರ ವಕೀಲ ಡಿ.ಪಿ.ಸಿಂಗ್ ವಾದಿಸಿದ್ದಾರೆ. ವಾದ್ರಾ ನುಣುಚಿಕೊಳ್ಳಲು ನೋಡುತ್ತಿದ್ದಾರೆ ಮತ್ತು ತನಿಖೆಗೆ ಯಾವುದೇ ಸಹಕಾರವನ್ನೂ ನೀಡುತ್ತಿಲ್ಲ ಎಂದು ಇಡಿ ವಾದಿಸಿದೆ.
ಕೆಳ ನ್ಯಾಯಾಲಯವು ವಾದ್ರಾಗೆ ಜಾಮೀನು ನೀಡಿರುವುದರ ವಿರುದ್ಧ ಇಡಿ ದೆಹಲಿ ಹೈಕೋರ್ಟ್ಗೆ ಮೇಲ್ಮನವಿಯನ್ನು ಸಲ್ಲಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ವಾದ್ರ ತನಿಖೆ ಎದುರಿಸುತ್ತಿದ್ದಾರೆ. ವಾದ್ರಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 9 ಆಸ್ತಿಗಳನ್ನು ಹೊಂದಿದ್ದು ಇದರ ಮೊತ್ತ 12 ಮಿಲಿಯನ್ ಪೌಂಡ್ ಆಗಿದೆ. ಮೂರು ವಿಲ್ಲಾ, ಐಷಾರಾಮಿ ಪ್ಲಾಟ್ಗಳನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ಅಂದರೆ 2005ರಿಂದ 2010ರಲ್ಲಿ ಖರೀದಿ ಮಾಡಿದ್ದರು. ಇವರ ವಿರುದ್ಧ ಅಕ್ರಮ ಭೂಕಬಳಿಕೆ ಆರೋಪವೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.