ನವದೆಹಲಿ: ವಾಹನ ಉದ್ಯಮದಲ್ಲಿನ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ಸರ್ಕಾರದ ಪ್ರಯತ್ನವನ್ನು ಸ್ವಾಗತಿಸಿರುವ ಮಾರುತಿ ಸುಝುಕಿ ಇಂಡಿಯಾವು ಕಾರ್ಪೊರೇಟ್ ತೆರಿಗೆ ಕಡಿತದ ಪ್ರಯೋಜನಗಳನ್ನು ತನ್ನ ಗ್ರಾಹಕರೊಂದಿಗೆ ಸ್ವಯಂಪ್ರೇರಣೆಯಿಂದ ಹಂಚಿಕೊಳ್ಳುವುದಾಗಿ ಬುಧವಾರ ಪ್ರಕಟಿಸಿದೆ. ದೇಶದ ಅತಿದೊಡ್ಡ ಕಾರು ತಯಾರಕನಾದ ಈ ಸಂಸ್ಥೆಯು, ಆಯ್ದ ಮಾಡೆಲ್ಗಳ ದರವನ್ನು ಎಕ್ಸ್-ಶೋರೂಂ ಬೆಲೆಯಲ್ಲಿ 5,000 ರೂ.ಗೆ ಇಳಿಸಲು ನಿರ್ಧರಿಸಿದೆ.
ಜನಪ್ರಿಯ ಮಾಡೆಲ್ಗಳಾದ ಆಲ್ಟೊ 800, ಆಲ್ಟೊ ಕೆ 10, ಸ್ವಿಫ್ಟ್ ಡೀಸೆಲ್, ಸೆಲೆರಿಯೊ, ಬಾಲೆನೊ ಡೀಸೆಲ್, ಇಗ್ನಿಸ್, ಡಿಜೈರ್ ಡೀಸೆಲ್, ಟೂರ್ ಎಸ್ ಡೀಸೆಲ್, ವಿಟಾರಾ ಬ್ರೆಝ ಮತ್ತು ಎಸ್-ಕ್ರಾಸ್ಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಹೊಸ ಬೆಲೆಗಳು ದೇಶಾದ್ಯಂತ ತಕ್ಷಣಕ್ಕೆ ಅನ್ವಯವಾಗಲಿದೆ. “ಈ ಬೆಲೆಯ ಕಡಿತವು ಕಂಪನಿಯ ವಾಹನ ಶ್ರೇಣಿಯ ಪ್ರಸ್ತುತ ಪ್ರಚಾರದ ಕೊಡುಗೆಗಳಿಗಿಂತ ಹೆಚ್ಚಿನದಾಗಿದೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
“ಬೆಲೆ ಕಡಿತವು ಖರೀದಿ ವೆಚ್ಚವು ವಿಶೇಷವಾಗಿ ಎಂಟ್ರಿ ಲೆವಲ್ ಗ್ರಾಹಕರಿಗೆ ಪ್ರಯೋಜನವನ್ನು ತಂದುಕೊಡಲಿದೆ ಎಂದು ಕಂಪನಿಯು ಆಶಾವಾದ ವ್ಯಕ್ತಪಡಿಸಿದೆ. ಹಬ್ಬದ ಋತುವಿನಲ್ಲಿ ದರ ಕಡಿತದ ಘೋಷಣೆಯನ್ನು ಮಾಡಿರುವುದು ಗ್ರಾಹಕರ ಮನಸ್ಸನ್ನು ಬದಲಾಯಿಸಲು ಮತ್ತು ಬೇಡಿಕೆಯನ್ನು ಸೃಷ್ಟಿಸಲು ಆ ಮೂಲಕ ಮಾರುಕಟ್ಟೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ” ಎಂದು ಅದು ಹೇಳಿದೆ.
ಭಾರತದಲ್ಲಿನ ಆಟೋಮೊಬೈಲ್ ಉದ್ಯಮವು ಕುಸಿತಕ್ಕೆ ಒಳಗಾಗುತ್ತಿದೆ ಎಂದು ವರದಿಗಳು ಬರುತ್ತಿರುವ ಸಂದರ್ಭದಲ್ಲೇ ಮಾರುತಿ ಸುಜುಕಿ ಮಹತ್ವದ ಘೋಷಣೆಯನ್ನು ಹೊರಡಿಸಿದ್ದು ಹೆಚ್ಚಿನ ಚೇತರಿಕೆಯನ್ನು ನೀಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.