ಭೋಪಾಲ್: ರೈಲ್ವೇ ನಿಲ್ದಾಣಗಳಲ್ಲಿ ನಾವು ಪುರುಷ ಕೂಲಿಗಳನ್ನೇ ನೋಡಿರುತ್ತೇವೆ. ಲಗೇಜುಗಳನ್ನು ಎತ್ತಿಕೊಂಡು ಹೋಗುವ ಕಾಯಕದಲ್ಲಿ ಹಿಂದಿನಿಂದಲೂ ಪುರುಷರ ತೊಡಗಿಕೊಂಡಿದ್ದಾರೆ. ಮಹಿಳೆಯರು ಈ ಕಾಯದತ್ತ ಮುಖ ಮಾಡುವುದು ತೀರಾ ವಿರಳ. ಆದರೆ ಭೋಪಾಲ್ ರೈಲ್ವೇ ನಿಲ್ದಾಣದಲ್ಲಿನ ಮಹಿಳೆಯೊಬ್ಬರು ಕೂಲಿಯಾಗಿ ಕೆಲಸ ಮಾಡುತ್ತಿದ್ದು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.
30 ವರ್ಷದ ಲಕ್ಷ್ಮೀ ಅವರು ಭೋಪಾಲ್ ರೈಲ್ವೇ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ ಇವರನ್ನು ನೋಡುವ ರೈಲ್ವೇ ಪ್ರಯಾಣಿಕರು ಒಂದು ಬಾರಿ ಆಶ್ಚರ್ಯಚಕಿತಗೊಳ್ಳುತ್ತಾರೆ. ಕೆಲವರು ಇವರ ಬಳಿ ಕೆಲಸ ಮಾಡಿಸಲು ನಿರಾಕರಿಸುತ್ತಾರೆ. ಕೆಲವರು ಸಂತೋಷದಿಂದ ಇವರಿಗೆ ಕೆಲಸವನ್ನು ಒಪ್ಪಿಸುತ್ತಾರೆ.
ಪತಿಯು ನಿಧನ ಹೊಂದಿದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳನ್ನು ಸಾಕುವ ಸಲುವಾಗಿ ಲಕ್ಷ್ಮೀ ಅವರಿಗೆ ತಮ್ಮ ಪತಿಯ ಈ ಉದ್ಯೋಗವನ್ನೇ ಮುಂದುವರೆಸುವುದು ಅನಿವಾರ್ಯವಾಗಿದೆ.
ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಂತಿರುವ ಲಕ್ಷ್ಮೀ ಅವರು, ಪತಿಯ 13 ನಂಬರಿನ ಬ್ಯಾಡ್ಜ್ ಧರಿಸಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಿತರ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.