ಹೋಸ್ಟನ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಟೆಕ್ಸಾಸ್ನ ಹೋಸ್ಟನ್ನಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಐಕ್ಯತೆ, ಸ್ನೇಹ ಮತ್ತು ದೂರದೃಷ್ಟಿಯ ಭವ್ಯತೆಯನ್ನು ಅನಾವರಣಗೊಳಿಸಿದರು. ಉಭಯ ನಾಯಕರು ಭಯೋತ್ಪಾದನೆ, ವ್ಯಾಪಾರ ಮತ್ತು ರಕ್ಷಣಾ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಒಮ್ಮತದ ಭಾವನೆಗಳನ್ನು ಪ್ರತಿಧ್ವನಿಸಿದರು.
ಭಾರತದ ಮಹತ್ವವನ್ನು ಪ್ರತಿಬಿಂಬಿಸಿದ ಟ್ರಂಪ್ ಅವರು, ಬಹಳ ಸಮಯಗಳ ನಂತರ ಭಾಷಣವನ್ನು ಮಾಡಲು ತಮ್ಮ ಅಧಿಕೃತ ಪೋಡಿಯಂ ಅನ್ನು ಬಳಕೆ ಮಾಡಲಿಲ್ಲ, ಬದಲಿಗೆ ಭಾರತ ಮತ್ತು ಯುಎಸ್ ಧ್ವಜಗಳನ್ನು ಹೊಂದಿದ್ದ ಪೋಡಿಯಂ ಅನ್ನು ಬಳಕೆ ಮಾಡಿದರು. ಈ ಮೂಲಕ ತಾನೆಷ್ಟು ಭಾರತಕ್ಕೆ ಮಹತ್ವ ನೀಡುತ್ತೇನೆ ಎಂಬುದನ್ನು ಸಾಂಕೇತಿಕವಾಗಿ ಸಾರಿದರು.
ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, “ಭಾರತ-ಅಮೆರಿಕ ಸಂಬಂಧವನ್ನು ವ್ಯಾಖ್ಯಾನಿಸುವ ಎಲ್ಲವನ್ನೂ ಸಂಭ್ರಮಿಸಲು ಪ್ರಧಾನಿ ಮೋದಿ ಮತ್ತು ನಾನು ಹೋಸ್ಟನ್ಗೆ ಬಂದಿದ್ದೇವೆ” ಎಂದು ಅವರು ಹೇಳಿದರು.
“ಅಭಿವೃದ್ಧಿ ಹೊಂದುತ್ತಿರುವ, ಸಮೃದ್ಧ, ಪ್ರಬುದ್ಧ, ಶ್ರಮಶೀಲ ಭಾರತೀಯ ಅಮೆರಿಕನ್ ಸಮುದಾಯದ 50,000 ಕ್ಕೂ ಹೆಚ್ಚು ಸದಸ್ಯರನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಉತ್ಕೃಷ್ಟಗೊಳಿಸುವ, ನಮ್ಮ ಮೌಲ್ಯಗಳನ್ನು ಎತ್ತಿಹಿಡಿಯುವ ನಾಲ್ಕು ಮಿಲಿಯನ್ ಅದ್ಭುತ ಭಾರತೀಯ ಅಮೆರಿಕನ್ನರು ಸೇರಲು ವಿಶೇಷವಾಗಿ ಕೃತಜ್ಞನಾಗಿದ್ದೇನೆ. ನೀವು ಅಮೆರಿಕನ್ನರಾಗಿರುವುದು ನಿಜಕ್ಕೂ ಹೆಮ್ಮೆ” ಎಂದರು.
“ಭಾರತೀಯ-ಅಮೆರಿಕನ್ನರೇ, ನೀವು ನಮ್ಮ ಸಂಸ್ಕೃತಿಯನ್ನು ಉತ್ಕೃಷ್ಟಗೊಳಿಸುತ್ತೀರಿ, ನೀವು ನಮ್ಮ ಮೌಲ್ಯಗಳನ್ನು ಉನ್ನತೀಕರಿಸುತ್ತೀರಿ, ನೀವು ಅಮೆರಿಕನ್ನರಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ನನ್ನ ಆಡಳಿತವು ಪ್ರತಿದಿನ ನಿಮಗಾಗಿ ಹೋರಾಡುತ್ತದೆ” ಎಂದು ಹೇಳಿದರು.
ಜಗತ್ತನ್ನು “ಇಸ್ಲಾಮಿಕ್ ಭಯೋತ್ಪಾದನೆಯಿಂದ” ಮುಕ್ತಗೊಳಿಸಲು ಭಾರತ ಮತ್ತು ಅಮೆರಿಕ ಬದ್ಧವಾಗಿವೆ ಎಂದು ಅವರು ಘೋಷಿಸಿದರು.
“ವಿಶ್ವದ ಅತ್ಯುತ್ತಮ ಉತ್ಪನ್ನಗಳಿಗೆ ಭಾರತೀಯರು ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಶೀಘ್ರದಲ್ಲೇ, ಭಾರತೀಯರು ಎನ್ಬಿಎ ಬ್ಯಾಸ್ಕೆಟ್ಬಾಲ್ಗೆ ಪ್ರವೇಶ ಪಡೆಯುತ್ತಿದ್ದಾರೆ. ಭಾರತದ ಮೊದಲ ಎನ್ಬಿಎ ಆಟವನ್ನು ವೀಕ್ಷಿಸಲು ಜನರು ಮುಂಬಯಿನಲ್ಲಿ ಸೇರುತ್ತಿದ್ದಾರೆ. ಪ್ರಧಾನಿಯವರೇ ನಾನು ಅದಕ್ಕೆ ಆಹ್ವಾನಿಸಲ್ಪಟ್ಟಿದ್ದೇನೆಯೇ?, ಆಶ್ಚರ್ಯಪಡಬೇಡಿ, ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ, ನಾನು ಬರಲೂಬಹುದು” ಎಂದು ಹೇಳುವ ಮೂಲಕ ಮುಂಬಯಿಯಲ್ಲಿ ನಡೆಯುತ್ತಿರುವ ಎನ್ಬಿಎ ಬಾಸ್ಕೆಟ್ ಬಾಲ್ ವೀಕ್ಷಣೆಗೆ ನಾನು ಭಾರತಕ್ಕೆ ಬರುತ್ತಿದ್ದೇನೆ ಎಂದು ಟ್ರಂಪ್ ಹಾಸ್ಯಭರಿತವಾಗಿ ಘೋಷಿಸಿಕೊಂಡರು.
ಇಂಡಿಯಾನಾ ಪೇಸರ್ಸ್ ಮತ್ತು ಸ್ಯಾಕ್ರಮೆಂಟೊ ಕಿಂಗ್ಸ್ ಅಕ್ಟೋಬರ್ 4 ಮತ್ತು 5 ರಂದು ಮುಂಬಯಿಯಲ್ಲಿ ಎರಡು ಕ್ರೀಡಾ ಋತುವಿನ ಕ್ರೀಡೆಗಳನ್ನು ಆಡಲಿದ್ದಾರೆ ಎಂದು ರಾಷ್ಟ್ರೀಯ ಬಾಸ್ಕೆಟ್ಬಾಲ್ ಸಂಸ್ಥೆ (ಎನ್ಬಿಎ) ಡಿಸೆಂಬರ್ 2018 ರಲ್ಲಿ ಘೋಷಣೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.