ನವದೆಹಲಿ: ಭವಿಷ್ಯದ ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಸಲುವಾಗಿ, ಸೋನಿ ಇಂಡಿಯಾವು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಮತ್ತು ಕೆಡ್ಮನ್ ಸ್ಕಿಲ್ಲಿಂಗ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಕೈಜೋಡಿಸಿದೆ.
ಈ ಟೆಕ್ ದಿಗ್ಗಜ ಸಂಸ್ಥೆಯು ಪ್ರತಿಭಾನ್ವಿತರಿಗೆ ಪ್ರೊಡಕ್ಟ್ ಟ್ರೈನಿಂಗ್ ನೀಡಲಿದೆ ಮತ್ತು ವಿಶೇಷ ಗ್ರಾಹಕ ನಿರ್ವಹಣೆಯನ್ನು ಒಳಗೊಂಡಿರುವ ನಡವಳಿಕೆಯ ಕೌಶಲ್ಯಗಳನ್ನು ಕಲಿಸಿ ಕೊಡಲಿದೆ.
“ಭಾರತದಲ್ಲಿ ಉದ್ಯೋಗದ ಅಭಿವೃದ್ಧಿಯ ಬದ್ಧ ಪಾಲುದಾರನಾಗಿ ಸೋನಿ ಇಂಡಿಯಾವು ಭಾರತೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಎನ್ಎಸ್ಡಿಸಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳಲು ಹೆಮ್ಮೆಪಡುತ್ತದೆ” ಎಂದು ಸೋನಿಯ ರಾಷ್ಟ್ರೀಯ ಮುಖ್ಯಸ್ಥ ಸೋನಿ ಸಂಜಯ್ ಭಟ್ನಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಬ್ಬದ ಋತುವಿನಲ್ಲಿ ದೇಶದಾದ್ಯಂತದ 150+ ಟಯರ್ I, II ಮತ್ತು III ನಗರಗಳಲ್ಲಿ ಸಹವರ್ತಿಯಾಗಿ NSDC ಯಿಂದ ಸಂಪನ್ಮೂಲಗಳನ್ನು ನೇಮಿಸಿಕೊಳ್ಳಲು ಸೋನಿ ಉದ್ದೇಶಿಸಿದೆ.
“ಸೋನಿ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾದೊಂದಿಗಿನ ಈ ಸಹಭಾಗಿತ್ವವು ನಮ್ಮ ಯುವಜನರಿಗೆ ಅವರ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಆ ಮೂಲಕ ಸುಸ್ಥಿರ ಜೀವನೋಪಾಯದ ಸಂಪರ್ಕವನ್ನು ಒದಗಿಸಲು ಸಹಾಯಕವಾಗಲಿದೆ ಎಂದು ನಾನು ನಂಬುತ್ತೇನೆ. ಈ ಒಪ್ಪಂದವು ಅಭ್ಯರ್ಥಿಗಳು ಮತ್ತು ಚಿಲ್ಲರೆ ಉದ್ಯಮಕ್ಕೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು NSDCಯ ಮನೀಶ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.