ಬೀಜಿಂಗ್: ಪ್ರಪಂಚದಲ್ಲಿ ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ಪಟ್ಟಿಗೆ ಚೀನಾ ಸೇರ್ಪಡೆಗೊಂಡಿದ್ದರೂ ಭಾರತದ ಪರಿಸರ ಮಾಲಿನ್ಯದ ಬಗ್ಗೆ ತನ್ನ ನೆಲದಲ್ಲಿ ಜಾಹೀರಾತು ಫಲಕಗಳನ್ನು ಹಾಕಿ ಅವಮಾನ ಮಾಡುತ್ತಿದೆ.
ಚೀನಾ ವಾಂಗ್ಫೂಜಿಂಗ್ ಜಾಹೀರಾತು ನಗರದಲ್ಲಿ ಹಾಕಲಾಗಿದ್ದು ಇದು ಚೀನಾದ ಜನಸಂದಣಿ ಇರುವ ಪ್ರದೇಶ. ಈ ಪ್ರದೇಶದಲ್ಲಿ ಭಾರತ ಹೆಚ್ಚು ಇಂಗಾಲವನ್ನು ಹೊರಸೂಸುತ್ತಿದೆ ಎಂದು ಬಿಂಬಿಸುವ ಜಾಹೀರಾತನ್ನು ಹಾಕಿದೆ.
ಚೀನಾ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಮತ್ತು ತನಗೆ ಬಂದಿರುವ ಅಪಖ್ಯಾತಿಗಳಿಂದ ಜಾರಿಕೊಳ್ಳಲು ಈ ರೀತಿ ಜಾಹಿರಾತುಗಳನ್ನು ಹಾಕಿದೆ ಎನ್ನಲಾಗುತ್ತಿದೆ. ಭಾರತದ ಪ್ರಮುಖ ನಗರಗಳಾದ ಮುಂಬೈ, ಅಲಹಾಬಾದ್, ಮತ್ತು ಇತರ ನಗರದ ಭಾವ ಚಿತ್ರವನ್ನು ಹಾಕಲಾಗಿದೆ ಮುಂಬೈ ನಲ್ಲಿ ಪ್ಲಾಸ್ಟಿಕ್ಗಳ ರಾಶಿಯಿಂದ ಮಕ್ಕಳಿಗೆ ಆಟಮಾಡಲು ಸಾಧ್ಯವಾಗುತ್ತಿಲ್ಲ ಎಂದು ಜಾಹಿರಾತಿನಲ್ಲಿ ಹೇಳಲಾಗಿದೆ.
ಅಲ್ಲದೇ ಅಲಹಾಬಾದ್ನಲ್ಲಿ “ಗಂಗಾ ಬಚಾವೋ” ಎಂದು ಹಾಕಲಾಗಿರುವ ಭಿತ್ತಿಪತ್ರದ ಕೆಳಗೆ ತ್ಯಾಜ್ಯಗಳ ರಾಶಿಯಿದ್ದು ಅದರಲ್ಲಿ ನಾಲ್ವರು ಹಾದು ಹೋಗುವ ಚಿತ್ರವನ್ನು ಪ್ರಕಟಿಸಲಾಗಿದೆ. ಇದನ್ನು ಇಂಗ್ಲೀಷ್ ಮತ್ತು ಚೀನಾ ಭಾಷೆಯಲ್ಲಿ ಬರೆಯಲಾಗಿದೆ.
ಈ ರೀತಿ ಮಾಡುವುದರಿಂದ ಚೀನಾ ತನಗೆ ತಟ್ಟಿದ ಅಪಖ್ಯಾತಿಯಿಂದ ದೂರ ಉಳಿಯಲು ಪ್ರಯತ್ನಿಸುತ್ತಿದೆ, ಮಾತ್ರವಲ್ಲ ಇತರ ರಾಷ್ಟ್ರಗಳಿಗೆ ಈ ಅಪಖ್ಯಾತಿ ಬರುವಂತೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.