ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ 18,000 ವಾಟರ್ ರೀಚಾರ್ಜ್ ಹೊಂಡಗಳು ಕಾರ್ಯಾಚರಣೆ ಆರಂಭಿಸಿದೆ ಮತ್ತು ಅಂತರ್ಜಲವನ್ನು ಮರುಪೂರಣವನ್ನು ಮಾಡಲು 850 ನೀರಿನ ಕೊಯ್ಲು ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ ಎಂದು ಅಲ್ಲಿನ ಜಿಲ್ಲಾ ಅಭಿವೃದ್ಧಿ ಆಯುಕ್ತರು ಮಾಹಿತಿಯನ್ನು ನೀಡಿದ್ದಾರೆ.
ಇಂಟಿಗ್ರೇಟೆಡ್ ವಾಟರ್ಶೆಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ (ಐಡಬ್ಲ್ಯೂಎಂಪಿ) ಯ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ನಡೆದ ಸಭೆಯಲ್ಲಿ ಜಿಲ್ಲಾ ಅಭಿವೃದ್ಧಿ ಆಯುಕ್ತ ಶೋಕತ್ ಐಜಾಝ್ ಭಟ್ ಅವರು ಟ್ಯಾಂಕ್ ನಿರ್ಮಾಣದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸಭೆಯಲ್ಲಿ, ಜಿಲ್ಲೆಯಲ್ಲಿ ಐಡಬ್ಲ್ಯೂಎಂಪಿ ಪ್ರಾರಂಭವಾದಾಗಿನಿಂದ ಕೈಗೊಂಡ ಚಟುವಟಿಕೆಗಳ ಬಗ್ಗೆ ಆಯುಕ್ತರಿಗೆ ವಿವರಗಳನ್ನು ನೀಡಲಾಯಿತು. ನೈಸರ್ಗಿಕ ಸಂಪನ್ಮೂಲವಾದ ನೀರಿನ ಸಂರಕ್ಷಣೆಗಾಗಿ ವಿವಿಧ ಸ್ಪ್ರಿಂಗ್ಸ್, ಗೇಬಿಯನ್ ರಚನೆಗಳ ಚೆಕ್ ಅಣೆಕಟ್ಟುಗಳು, ಪರ್ಕೋಲೇಷನ್ ಟ್ಯಾಂಕ್ಗಳ ನಿರ್ಮಾಣವನ್ನೂ ಐಡಬ್ಲ್ಯೂಎಂಪಿ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಜಲಮೂಲಗಳ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ಮಾಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಆಯುಕ್ತರು,”ಐಡಬ್ಲ್ಯೂಎಂಪಿಯ ಪಾತ್ರವು ಮಹತ್ವದ್ದಾಗಿದೆ ಮತ್ತು ಅಂತರ್ಜಲ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಫಲಿತಾಂಶಗಳನ್ನು ಸಾಧಿಸಲು ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕು ಎಂದು ಅಧಿಕಾರಿಗಳನ್ನು ಕೋರುತ್ತೇನೆ” ಎಂದಿದ್ದಾರೆ.
ನೀರನ್ನು ಉಳಿಸಲು ಮತ್ತು ಅದರ ನ್ಯಾಯಯುತ ಬಳಕೆಯನ್ನು ಮಾಡುವಲ್ಲಿ ಎಲ್ಲರೂ ಮಹತ್ವದ ಪಾತ್ರವನ್ನು ವಹಿಸಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.