ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿನ ಸರ್ಕಾರಿ ಶಾಲೆಗಳನ್ನು ಪರಿವರ್ತನೆಗೊಳಿಸುವಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸಲು ಅಲ್ಲಿನ ಆಡಳಿತ ನಿರ್ಧರಿಸಿದೆ. ವೈವಿಧ್ಯ ಅಧ್ಯಯನ ಮತ್ತು ಸ್ಪರ್ಧಾತ್ಮಕ ಅಧ್ಯಯನ ಪರಿಕರಗಳನ್ನು ಹೊಂದಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಶಾಲೆಗಳನ್ನು ರೂಪಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.
ಶ್ರೀನಗರದ ಉಪ ಆಯುಕ್ತ ಡಾ.ಶಹೀದ್ ಇಕ್ಬಾಲ್ ಚೌಧುರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ.
25 ಶಾಲೆಗಳನ್ನು ಪ್ರಾಯೋಗಿಕವಾಗಿ ಆಧುನೀಕರಿಸಲಾಗುತ್ತಿದೆ, ಶಾಲಾ ಕಟ್ಟಡವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ, ಅತ್ಯಾಧುನಿಕ ಅಧ್ಯಯನ ಪರಿಕರಗಳನ್ನು, ಶೈಕ್ಷಣಿಕ ಪರಿಕರಗಳನ್ನು ಇದು ಹೊಂದಲಿದೆ. ಶ್ರೀನಗರ ಜಿಲ್ಲೆಯಲ್ಲಿ 52 ಸರ್ಕಾರಿ ಶಾಲೆಗಳ ಪೈಕಿ 25 ಅನ್ನು ಮೊದಲು ಆಯ್ಕೆ ಮಾಡಲಾಗುತ್ತದೆ. ಶಾಲೆಗಳಿಗೆ ಒದಗಿಸಲಾದ ಭೂಮಿ, ಕಟ್ಟಡಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಮಕ್ಕಳ ಸೇರ್ಪಡೆ, ಹಾಜರಾತಿಗಳ ಬಗ್ಗೆಯೂ ಗಮನ ಹರಿಸಲಾಗುತ್ತದೆ.
25 ಶಾಲೆಗಳ ಅಭಿವೃದ್ಧಿ 3 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಶಾಲೆಗಳ ಸಮಗ್ರ ಅಭಿವೃದ್ಧಿಗೆ ಇದನ್ನು ಬಳಕೆ ಮಾಡಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಚೌಧರಿ ಅವರು, ಈ ಮಹತ್ವಾಕಾಂಕ್ಷೆಯ ಯೋಜನೆಯ ಯಶಸ್ವಿ ಕಾರ್ಯಗತಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಹೊರಗಿನ ಸರ್ಕಾರಿ ಶಾಲೆಗಳಲ್ಲಿ ಅಸ್ತಿತ್ವದಲ್ಲಿರುವ ನೈಜ ಮಾದರಿಗಳ ಆಧಾರದ ಮೇಲೆ ಸಮಗ್ರ ಆಧುನೀಕರಣ ಯೋಜನೆಯನ್ನು ರೂಪಿಸಲಾಗಿದೆ ಎಂದಿದ್ದಾರೆ.
“ಈ ಶಾಲೆಗಳು ಅವುಗಳ ಕಾರ್ಯಚಟುವಟಿಕೆಯಲ್ಲಿ ಸ್ವಾಯತ್ತತೆಯನ್ನು ಹೊಂದಿರಲಿವೆ ಮತ್ತು ಉತ್ಕೃಷ್ಟತೆಯ ಗುರಿಗಳ ಸಾಧನೆಗೆ ಅನುಕೂಲವಾಗುವಂತೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತವೆ. ಈ ಶಾಲೆಗಳಿಂದ ಪ್ರಾರಂಭವಾಗುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪುನರ್ ನಿರ್ಮಿಸುವುದು ಮತ್ತು ಅವುಗಳನ್ನು ಜಿಲ್ಲೆಯಾದ್ಯಂತ ಮಾದರಿಯನ್ನಾಗಿ ಪರಿವರ್ತಿಸುವುದು ಯೋಜನೆಯ ದೊಡ್ಡ ಗುರಿ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.