News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

78 ದಿನಗಳ ವೇತನವನ್ನು ಬೋನಸ್ ಆಗಿ ಪಡೆಯಲಿದ್ದಾರೆ 11 ಲಕ್ಷ ರೈಲ್ವೆ ನೌಕರರು

ನವದೆಹಲಿ: 11 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ವೇತನವನ್ನು ಬೋನಸ್ ಆಗಿ ನೀಡಲು ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ ಒಟ್ಟು 2,024 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಜಾವಡೇಕರ್‌ ವಿವರಿಸಿದ್ದಾರೆ.

ಸಚಿವ ಸಂಪುಟದ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದು, ಸತತ 6ನೇ ಬಾರಿಗೆ ರೈಲ್ವೆ ಉದ್ಯೋಗಿಗಳು ಪ್ರೊಡಕ್ಟಿವಿಟಿ ಲಿಂಕ್ಡ್ ಬೊನಸ್ ಪಡೆಯುತ್ತಿದ್ದಾರೆ. 11,52,000 ರೈಲ್ವೆ ನೌಕರರು 78 ದಿನಗಳ ವೇತನವನ್ನು ಪಡೆಯಲಿದ್ದಾರೆ. ಇದು ಅವರ ಉತ್ಪಾದನೆಗೆ ತಕ್ಕ ಪುರಸ್ಕಾರವಾಗಿದೆ. ಇದಕ್ಕಾಗಿ ಒಟ್ಟು 2,024 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದಿದ್ದಾರೆ.

1970-80 ರಲ್ಲಿ ಪ್ರಾಡಕ್ಟಿವಿಟಿ ಲಿಂಕ್ಡ್ ಬೋನಸ್ ಅನ್ನು ಪರಿಚಯಿಸಲಾಗಿದೆ. ಆದರೆ ಇದನ್ನು ಅನುಷ್ಠಾನಕ್ಕೆ ತರುತ್ತಿರುವ ಮೊದಲ ಸರ್ಕಾರಿ ಇಲಾಖೆ ರೈಲ್ವೆ ಆಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top