ಲಕ್ನೋ: 2022 ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ದೈನಿಕ್ ಜಾಗರಣ್ಗೆ ನೀಡಿದ ಸಂದರ್ಶನದಲ್ಲಿ ಅವರು, ಕಳೆದ ಎರಡೂವರೆ ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
“ಈ ಹಿಂದೆ ಅಯೋಧ್ಯೆಯ ದೀಪೋತ್ಸವ ಕಳೆಗುಂದಿತ್ತು, ಆದರೆ ನಮ್ಮ ಸರ್ಕಾರ ಅದನ್ನು ಪುನರುಜ್ಜೀವನಗೊಳಿಸಿದೆ ಮತ್ತು ಮಹಾ ಕುಂಭವು ನಮ್ಮ ಸರ್ಕಾರದ ದೊಡ್ಡ ಯಶಸ್ಸಿನ ಕಥೆಯಾಗಿದೆ. ರಾಜ್ಯವು ಸದ್ಯದ ಪ್ರಗತಿ ದರದೊಂದಿಗೆ ಮುಂದುವರೆದರೆ 2030 ರ ವೇಳೆಗೆ 1 ಟ್ರಿಲಿಯನ್ ಯುಎಎಸ್ ಡಿ ಆರ್ಥಿಕತೆಯನ್ನು ತಲುಪಲಿದೆ. ಒಂದು ವೇಳೆ ಪ್ರಗತಿಯ ವೇಗವರ್ಧನೆಯಾದರೆ 2024ಕ್ಕೇ ಈ ಗುರಿಯನ್ನು ತಲುಪಬಹುದಾಗಿದೆ” ಎಂದಿದ್ದಾರೆ.
“ಪ್ರಸ್ತುತ ನಮ್ಮ ರಾಜ್ಯದ ಬೆಳವಣಿಗೆಯ ದರವು ಸುಮಾರು 8% ರಷ್ಟಿದೆ ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ 40 ಲಕ್ಷ ಕೋಟಿ ರೂ.ಗಳ ಹೂಡಿಕೆ ಪಡೆಯುವುದು ನಮ್ಮ ಸರ್ಕಾರದ ಗುರಿ. ಪ್ರಸ್ತುತ, ಯುಪಿಯಲ್ಲಿ ವ್ಯಕ್ತಿಯ ತಲಾ ಆದಾಯ 64,000 ರೂ. ಮತ್ತು ರಾಷ್ಟ್ರೀಯ ಸರಾಸರಿ 1,20,000 ರೂ. 2024 ರ ವೇಳೆಗೆ ಯುಪಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಿದರೆ, ಪ್ರತಿ ಬಂಡವಾಳದ ಆದಾಯವು ದ್ವಿಗುಣಗೊಳ್ಳಬಹುದು” ಎಂದಿದ್ದಾರೆ.
ಇದನ್ನು ಸಾಧಿಸಲು ಯುಪಿ ಸರ್ಕಾರ ಕೃಷಿ, ಸಹಕಾರಿ ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಯತ್ತ ಗಮನ ಹರಿಸಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸುವತ್ತ ಗಮನ ಹರಿಸಲಾಗುತ್ತಿದೆ ಎಂದರು. ಮಾನವಶಕ್ತಿ ಬಳಕೆಯನ್ನು ಸುಧಾರಿಸಲು, ರಾಜ್ಯ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೂ ಹೆಚ್ಚಿನ ಉತ್ತೇಜನಗಳನ್ನು ನೀಡುತ್ತಿದೆ ಎಂದಿದ್ದಾರೆ.
“ನಾವು ದೊಡ್ಡ ಗುರಿಗಳನ್ನು ಸಾಧಿಸಬೇಕಾದಾಗ ತಾಳ್ಮೆಯಿಂದಿರಬೇಕು. ಸವಾಲುಗಳನ್ನು ತೆಗೆದುಕೊಳ್ಳಲು ನಾವು ಬದ್ಧರಾಗಿರಬೇಕು. ನಾನು ಎಂದಿಗೂ ನಿರಾಶೆಗೊಳ್ಳುವುದಿಲ್ಲ. ಪ್ರತಿಯೊಂದು ಘಟನೆಯಿಂದ ನಾನು ಯಾವಾಗಲೂ ಏನನ್ನಾದರೂ ಕಲಿಯುತ್ತೇನೆ. ಒತ್ತಡದ ಸಂದರ್ಭಗಳಲ್ಲಿ ನಾನು ಯೋಗಿ. ನಾನು ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡುತ್ತೇನೆ ಮತ್ತು ಆದ್ದರಿಂದ ಪ್ರತಿದಿನ ಕೇವಲ 3.5-4 ಗಂಟೆಗಳ ಕಾಲ ನಿದ್ದೆ ಮಾಡಿದರೂ ನಾನು ದಿನವಿಡೀ ಉತ್ಸಾಹದಿಂದಿರುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.