ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ 69ನೇ ಜನ್ಮದಿನವನ್ನು ಆಚರಿಸುವ ಸಲುವಾಗಿ ವ್ಯಕ್ತಿಯೊಬ್ಬರು ವಾರಣಾಸಿಯ ಸಂಕಟ್ ಮೋಚನ್ ದೇವಾಲಯದ ಆಂಜನೇಯ ದೇವರಿಗೆ 1.25 ಕೆಜಿ ತೂಕದ ಬಂಗಾರದ ಕಿರೀಟವನ್ನು ಅರ್ಪಣೆ ಮಾಡಿದ್ದಾರೆ.
ಅರವಿಂದ್ ಸಿಂಗ್ ಎಂಬುವವರು ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೋದಿ ಎರಡನೆಯ ಅವಧಿಗೆ ಮರು ಆಯ್ಕೆಯಾದರೆ ಚಿನ್ನದ ಕಿರೀಟ ಸಮರ್ಪಣೆ ಮಾಡುವುದಾಗಿ ಹರಕೆ ಹೊತ್ತಿದ್ದರು.
“ಲೋಕಸಭಾ ಚುನಾವಣೆಗೂ ಮುಂಚಿತವಾಗಿ, ಮೋದಿಯವರು ಎರಡನೇಯ ಅವಧಿಗೆ ಸರ್ಕಾರ ರಚನೆ ಮಾಡಿದರೆ ಆಂಜನೇಯನಿಗೆ ಚಿನ್ನದ ಕಿರೀಟ ಸಮರ್ಪಿಸುವ ಹರಕೆಯನ್ನು ಹೊತ್ತುಕೊಂಡಿದ್ದೆ” ಎಂದು ಅರವಿಂದ್ ಸಿಂಗ್ ಹೇಳಿದ್ದಾರೆ.
“ಕಳೆದ 75 ವರ್ಷಗಳಿಂದ ಯಾರೊಬ್ಬರೂ ಮಾಡದ ರೀತಿಯಲ್ಲಿ ಮೋದಿಯವರು ರಾಷ್ಟ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಅವರ ಜನ್ಮದಿನದ ಮುನ್ನಾದಿನ ಚಿನ್ನದ ಕಿರೀಟವನ್ನು ದೇವರಿಗೆ ಅರ್ಪಿಸಲು ನಾವು ನಿರ್ಧರಿಸಿದೆವು. ಭಾರತ ಬಂಗಾರದಂತೆ ಹೊಳೆಯಲಿ ಎಂಬುದು ನಮ್ಮ ಆಶಯ. ಕಾಶಿಯ ಜನರಿಂದ ಇದು ಅವರಿಗೆ ಉಡುಗೊರೆ” ಎಂದಿದ್ದಾರೆ.
ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿಯು ಸೆ.14ರಿಂದ ಸೆ.20ರವರೆಗೆ ಒಂದು ವಾರಗಳ ಕಾಲ ‘ಸೇವ ಸಪ್ತಾಹ’ವನ್ನು ಆಚರಣೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.