ಶಿಲ್ಲಾಂಗ್: ಭಾರತೀಯ ಸೇನೆ ಮತ್ತು ರಾಯಲ್ ಥಾಯ್ಲೆಂಡ್ ಸೇನೆಯ ಜಂಟಿ ಸೇನಾ ಸಮರಾಭ್ಯಾಸ ‘ಮೈತ್ರಿ (MAITREE) 2019’ ಸೋಮವಾರ ಮೇಘಾಲಯದ ಉಮ್ರೊಯ್ನಲ್ಲಿ ಪ್ರಾರಂಭವಾಗಿದೆ.
ವಾರ್ಷಿಕ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸ ಉಮ್ರಾಯ್ನ ಜಾಯಿಂಟ್ ಟ್ರೈನಿಂಗ್ ನೋಡ್ನಲ್ಲಿ (ಜೆಟಿಎನ್) ಪ್ರಾರಂಭವಾಗಿದೆ. ಅರಣ್ಯ ಭೂಪ್ರದೇಶ ಮತ್ತು ನಗರ ಸನ್ನಿವೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೈನಿಕರಿಗೆ ತರಬೇತಿ ನೀಡುವ ಉದ್ದೇಶವನ್ನು ಈ ಸಮರಾಭ್ಯಾಸ ಹೊಂದಿದೆ.
14 ದಿನಗಳ ಸಮರಾಭ್ಯಾಸವನ್ನು ವಿಶ್ವಸಂಸ್ಥೆಯ ಮಾನದಂಡ 2006 ರ ವಿಸ್ತಾರವಾದ ಚೌಕಟ್ಟಿನಡಿಯಲ್ಲಿ ನಡೆಸಲಾಗುತ್ತಿದೆ.
ತಂತ್ರಗಳು, ಕೌಶಲ್ಯಗಳು ಮತ್ತು ಕಾರ್ಯವಿಧಾನಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಬೋಧನೆ, ಡ್ರಿಲ್, ಪ್ರಾತ್ಯಕ್ಷಿಕೆಗಳು ಮತ್ತು ಕೌಶಲ್ಯ ತರಬೇತಿ ಮುಂತಾದ ರೂಪದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ತರಬೇತಿ ನೀಡಲಾಗುತ್ತದೆ. ಸಮರಾಭ್ಯಾಸದ ಮೂಲಕ ಎರಡೂ ಸೇನೆಗಳು ತಮ್ಮ ಅಮೂಲ್ಯ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.
2006 ರಿಂದ ಭಾರತದ ಮತ್ತು ಥಾಯ್ಲೆಂಡ್ ನಡುವಣ ದ್ವಿಪಕ್ಷೀಯ ಬಾಂಧವ್ಯದ ಭಾಗವಾಗಿ MAITREE -2019 ಅನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.