ನವದೆಹಲಿ: 312 ಸಿಖ್ ವಿದೇಶಿ ಪ್ರಜೆಗಳನ್ನು ಕಪ್ಪು ಪಟ್ಟಿಯಿಂದ ತೆಗೆದು ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಅವರು ಭಾರತಕ್ಕೆ ಪ್ರಯಾಣಿಸಬಹುದಾಗಿದೆ. ಕೇಂದ್ರದ ಈ ಕ್ರಮವನ್ನು ಪ್ರಮುಖ ಸಿಖ್ ನಾಯಕರುಗಳು ಪ್ರಶಂಸಿಸಿದ್ದಾರೆ. ಖಲಿಸ್ತಾನ್ ಚಳುವಳಿಯ ಮೂಲಕ ಭಾರತ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಇವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು.
ಖಲಿಸ್ಥಾನ್ ಬೆಂಬಲಿಗನಾಗಿದ್ದ ವಾಸನ್ ಸಿಂಗ್ ಜಾಫರ್ವಾಲ್, ಯುನೈಟೆಡ್ ಅಕಾಲಿ ದಳ (ಯುಎಡಿ) ಪ್ರಧಾನ ಕಾರ್ಯದರ್ಶಿ ಭಾಯ್ ಸತ್ನಾಮ್ ಸಿಂಗ್ ಮನವ್ ಮತ್ತು ಸರ್ಬತ್ ಖಲ್ಸಾದ ಜತೇದರ್ ಭಾಯ್ ಧಿಯಾನ್ ಸಿಂಗ್ ಮಾಂಡ್ ಅವರುಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಕೇಂದ್ರ ಸರ್ಕಾರ 312 ಸಿಖ್ಖರನ್ನು 314 ಹೆಸರುಗಳನ್ನು ಒಳಗೊಂಡ “ಕಪ್ಪು ಪಟ್ಟಿ” ಯಿಂದ ತೆಗೆದುಹಾಕಿದೆ ಎಂದು ಗೃಹ ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿವೆ. ಈ ಪಟ್ಟಿಯಲ್ಲಿ ಇದೀಗ ಇಬ್ಬರು ಮಾತ್ರ ಉಳಿದಿದ್ದಾರೆ.
ಕಪ್ಪು ಪಟ್ಟಿಯಿಂದ ಹೊರಬಿದ್ದಿರುವ ಈ 312 ಜನ ವಿದೇಶಿಯರು ಇನ್ನು ಮುಂದೆ ಭಾರತೀಯ ವೀಸಾ ಪಡೆಯಲು ಮತ್ತು ಸಾಗರೋತ್ತರ ಭಾರತೀಯ ಕಾರ್ಡನ್ನು ಪಡೆಯಲು ಅರ್ಹರಾಗಿದ್ದಾರೆ.
1980ರ ದಶಕದಲ್ಲಿ ಪ್ರತ್ಯೇಕ ಖಲಿಸ್ತಾನ್ ಚಳವಳಿ ತೀವ್ರವಾಗಿದ್ದ ಸಮಯದಲ್ಲಿ, ಸಿಖ್ ಸಮುದಾಯಕ್ಕೆ ಸೇರಿದ ಕೆಲವರು ಭಾರತದಲ್ಲಿ ಮತ್ತು ವಿದೇಶದಲ್ಲಿ ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದರು. ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.