ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕಿರುವ ಅತ್ಯಮೂಲ್ಯ ಉಡುಗೊರೆಗಳ ಪ್ರದರ್ಶನ ಮತ್ತು ಇ-ಹರಾಜನ್ನು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಶನಿವಾರ ಉದ್ಘಾಟಿಸಿದರು.
ಈ ಎರಡನೇ ಸುತ್ತಿನ ಹರಾಜಿನಲ್ಲಿ 2700 ಕ್ಕೂ ಹೆಚ್ಚು ಉಡುಗೊರೆಗಳು ಮತ್ತು ಸ್ಮರಣಿಕೆಗಳು ಮಾರಾಟ ಕಾಣಲಿವೆ. ಇವುಗಳ ಮಾರಾಟದಿಂದ ಬಂದ ಹಣವನ್ನು ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಬಳಸಲಾಗುತ್ತಿ. ಹರಾಜು www.pmmementos.gov.in ಪೋರ್ಟಲ್ನಲ್ಲಿ ಅಕ್ಟೋಬರ್ 3 ರವರೆಗೆ ಮುಂದುವರೆಯಲಿದೆ.
ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪ್ರಹ್ಲಾದ್ ಪಟೇಲ್ ಅವರು, “ಭಾರತದ ಜೀವಸೆಲೆಯಾದ ಗಂಗಾ ನದಿಯ ಪುನರುಜ್ಜೀವನಕ್ಕೆ ತಮಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿದ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ನದಿಯನ್ನು ಸಂರಕ್ಷಿಸುವ ಉದಾತ್ತ ಕಾರಣಕ್ಕಾಗಿ ಅವರು ತಾವು ದೇಶ ವಿದೇಶಗಳಲ್ಲಿ ಪಡೆದುಕೊಂಡ ಎಲ್ಲಾ ಉಡುಗೊರೆಗಳನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ” ಎಂದಿದ್ದಾರೆ.
ಈ ಉಡುಗೊರೆಗಳನ್ನು ಮತ್ತು ಸ್ಮರಣಿಕೆಗಳನ್ನು ಹಣದ ಮೂಲಕ ಅಳೆಯಲು ಸಾಧ್ಯವಿಲ್ಲ, ಅವುಗಳ ಜೊತೆಗಿನ ಭಾವನೆಗಳು ಮತ್ತು ಮೌಲ್ಯಗಳ ಮೂಲಕ ಅಳೆಯಬೇಕು ಎಂದು ಅವರು ಹೇಳಿದ್ದಾರೆ.
ಉನ್ನತ ಮಟ್ಟದಲ್ಲಿ ಬಿಡ್ ಮಾಡಿದ 20 ಮಂದಿಗೆ ಸರ್ಕಾರದ ವತಿಯಿಂದ ಶ್ಲಾಘನಾ ಪತ್ರವನ್ನು ಕಳುಹಿಸಿಕೊಡಲಾಗುವುದು, ನಮಾಮಿ ಗಂಗೆ ಯೋಜನೆಗೆ ಕೊಡುಗೆ ನೀಡಿದ್ದನ್ನು ಗೌರವಿಸಿ ಈ ಶ್ಲಾಘನಾ ಪತ್ರವನ್ನು ನೀಡಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.