ನವದೆಹಲಿ: ರಕ್ಷಣಾ ವಲಯವನ್ನು ಸಂಪೂರ್ಣ ದೇಶೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ, ಖಾಸಗಿ ಬೆಂಗಳೂರು ಕಂಪನಿಯ ಎಸ್ಎಸ್ಎಸ್ ಡಿಫೆನ್ಸ್ ಭಾರತೀಯ ಸೇನೆಯ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಎರಡು ಸ್ನಿಫರ್ ರೈಫಲ್ ಪ್ರೊಟೊಟೈಪ್ಗಳನ್ನು ಅಭಿವೃದ್ಧಿಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಎಸ್ಎಸ್ ಡಿಫೆನ್ಸ್ ಸಿಇಓ ವಿವೇಕ್ ಕೃಷ್ಣನ್ ಅವರು, “ಸ್ನಿಫರ್ ರೈಫಲ್ಗಳನ್ನು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದವರಲ್ಲಿ ನಾವು ಮೊದಲಿಗರು. ನಾವು ಈ ಶಸ್ತ್ರಾಸ್ತ್ರವನ್ನು ಆಪರೇಟ್ ಮಾಡಲು ಬಳಕೆದಾರರಿಗೆ ಮದ್ದುಗುಂಡು, ಆಪ್ಟಿಕ್ಸ್ ಮತ್ತು ಇತರ ಪರಿಕರಗಳನ್ನು ಸಹ ಒದಗಿಸುತ್ತೇವೆ. ಸಶಸ್ತ್ರ ಪಡೆಗಳು ಪ್ರಸ್ತುತ ಇವುಗಳನ್ನು ವಿವಿಧ ಕಂಪನಿಗಳಿಂದ ಖರೀದಿಸುತ್ತಿದೆ ”ಎಂದು ಹೇಳಿದ್ದಾರೆ.
ಅಭಿವೃದ್ಧಿಪಡಿಸಲಾದ ಎರಡೂ ಸ್ನಿಫರ್ ರೈಫಲ್ಗಳೂ ಅತ್ಯುತ್ತಮ ಮಿನಿಟ್ ಆಫ್ ಆ್ಯಂಗಲ್ ಎಂಬ ನಿಖರ ಸೂಚಕವನ್ನು ಹೊಂದಿದೆ. ಈ ಸ್ನಿಫರ್ ಈಗಾಗಲೇ ಅಮೆರಿಕಾದಲ್ಲಿ ಯಶಸ್ವಿ ಪರೀಕ್ಷೆಗೆ ಒಳಗಾಗಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಆರ್ ಮಚಾನಿ ಹೇಳಿದ್ದಾರೆ.
ಸ್ನಿಫರ್ ರೈಫಲ್ಗಳ ದೇಶೀಯ ಉತ್ಪಾದನೆ ದೇಶೀಯತೆಯ ಕೊರತೆಯನ್ನು ಎದುರಿಸುತ್ತಿದೆ, ಇದುವರೆಗೂ ಭಾರತೀಯ ಸೇನೆಯು ಇದನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಪ್ರಸ್ತುತ ಜರ್ಮನಿ, ರಷ್ಯಾ, ಅಮೆರಿಕಾ ಮತ್ತು ಇತರ ದೇಶಗಳ ಸ್ನಿಪರ್ ರೈಫಲ್ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.