ನವದೆಹಲಿ: ಕಳೆದ ತಿಂಗಳು ನಿಧನರಾದ ಮಾಜಿ ಕೇಂದ್ರ ಸಚಿವ ಮತ್ತು ದೆಹಲಿ ಆ್ಯಂಡ್ ಡಿಸ್ಟ್ರಿಕ್ಸ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಹೆಸರನ್ನು ದೆಹಲಿಯ ಖ್ಯಾತ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ.
1999 ರಿಂದ 2013 ರವರೆಗೆ ಡಿಡಿಸಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜೇಟ್ಲಿ ಅವರನ್ನು ಗೌರವಿಸಲು ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ. ಜವಾಹರಲಾಲ್ ನೆಹರು ಕ್ರೀಡಾಂಗಣದ ವೇಟ್ಲಿಫ್ಟಿಂಗ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮರುನಾಮಕರಣವನ್ನು ನರೆವೇರಿಸಲಾಯಿತು. ದೆಹಲಿಯ ಪ್ರಸಿದ್ಧ ಕ್ರಿಕೆಟ್ ಆವರಣದ ಒಂದು ಸ್ಟ್ಯಾಂಡ್ಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಇದೇ ವೇಳೆ ಇಡಲಾಯಿತು.
ಕ್ರಿಕೆಟ್ ಸ್ಟೇಡಿಯಂಗೆ ಜೇಟ್ಲಿಯವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ, ಆದರೆ ಫಿರೋಜ್ ಷಾ ಕೋಟ್ಲಾ ಮೈದಾನದ ಹೆಸರು ಬದಲಾಗದೆ ಹಾಗೆಯೇ ಉಳಿಯಲಿದೆ.
ಕ್ರಿಕೆಟ್ ಸ್ಟ್ಯಾಂಡ್ಗೆ ತನ್ನ ಹೆಸರನ್ನು ಇಟ್ಟಿರುವುದಕ್ಕೆ ವಿರಾಟ್ ಕೊಹ್ಲಿ ಅವರು ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದು, ಡಿಡಿಸಿಎಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ. 2001ರಲ್ಲಿ ಈ ಮೈದಾನಕ್ಕೆ ಸಹೋದರನೊಂದಿಗೆ ಬಂದು ಕ್ರಿಕೆಟ್ ನೋಡಿದ ಅನುಭವವನ್ನು ಅವರು ಈ ವೇಳೆ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಡಿಸಿಎಯ ಮುಖ್ಯಸ್ಥ ರಜತ್ ಶರ್ಮಾ ಅವರು, “ವಿರಾಟ್ ಕೊಹ್ಲಿಯ ಗೌರವಾರ್ಥವಾಗಿ ನಾನು ಸ್ಟ್ಯಾಂಡ್ಗೆ ಅವರ ಹೆಸರಿಡಲು ನಿರ್ಧರಿಸಿದ್ದನ್ನು ಮೊದಲು ಅರುಣ್ ಜೇಟ್ಲಿ ಅವರಿಗೆ ತಿಳಿಸಿದ್ದೆ. ಅದಕ್ಕವರು, ವಿಶ್ವ ಕ್ರಿಕೆಟ್ನಲ್ಲಿ ವಿರಾಟ್ಗಿಂತ ಉತ್ತಮ ಆಟಗಾರನಿಲ್ಲ, ಒಳ್ಳೆಯ ನಿರ್ಧಾರ ಮಾಡಿದ್ದೀರಿ ಎಂದು ಅವರು ನನಗೆ ಹೇಳಿದರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.