ನವದೆಹಲಿ: ಭಾರತೀಯ ಮುಸ್ಲಿಮರು ಭಯಪಡಬೇಕಾದ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಹೇಳಿದ್ದಾರೆ. ಪಾರ್ಸಿ, ಬೌದ್ಧ ಮತ್ತು ಜೈನ್ ಮುಂತಾದ ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯದವರು ಯಾವುದೇ ಆತಂಕವಿಲ್ಲದೆ ನಮ್ಮ ದೇಶದಲ್ಲಿ ಜೀವಿಸುತ್ತಿದ್ದಾರೆ ಎಂದಿದ್ದಾರೆ.
‘ಇತರ ಅಲ್ಪಸಂಖ್ಯಾತರು ತಮ್ಮನ್ನು ತಾವು ಸುರಕ್ಷಿತರೆಂದು ಭಾವಿಸಿಕೊಂಡಿದ್ದಾರೆ, ಹೀಗಿರುವಾಗ ಮುಸ್ಲಿಮರು ಯಾಕೆ ಭಯಪಡಬೇಕು? 16 ಕೋಟಿ ಮುಸ್ಲಿಮರು ಭಾರತದಲ್ಲಿದ್ದಾರೆ, ಅವರು ಭಯಪಡಬೇಕಾಗಿಲ್ಲ” ಎಂದು ರಾಜಧಾನಿಯಲ್ಲಿ ಅಕಾಡೆಮಿಕ್ಸ್ ಫಾರ್ ನೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಕೃಷ್ಣ ಗೋಪಾಲ್ ಹೇಳಿದರು.
“ಭಾರತದಲ್ಲಿ ಎಷ್ಟು ಪಾರ್ಸಿಗಳು ಇದ್ದಾರೆ, ಹೆಚ್ಚು ಕಮ್ಮಿ 50000 ದಷ್ಟು, ಜೈನರು 45 ಲಕ್ಷ ಮತ್ತು ಸುಮಾರು 80 ಲಕ್ಷ ಬೌದ್ಧರು ಇದ್ದಾರೆ. ಯಹೂದಿಗಳು ಕೇವಲ ಐದು ಸಾವಿರದಷ್ಟಿದ್ದಾರೆ. ಅವರಿಗೆ ಯಾವ ರೀತಿಯ ಭಯವಿಲ್ಲ” ಎಂದರು.
“ಮುಸ್ಲಿಮರ ಸಂಖ್ಯೆ 16 ಕೋಟಿಗಿಂತ ಹೆಚ್ಚು. ಹೀಗಿದ್ದಾಗ ಅವರು ಯಾಕೆ ಭಯಪಡುತ್ತಾರೆ. ಯಾಕೆ ಮತ್ತು ಯಾರಿಗೆ ಭಯಪಡುತ್ತಿದ್ದಾರೆ? 600 ವರ್ಷಗಳ ಕಾಲ ದೇಶವನ್ನು ಆಳಿದ ಸಮುದಾಯವೊಂದು ಭಯಪಡುವುದು ನಿಜಕ್ಕೂ ದೊಡ್ಡ ಪ್ರಶ್ನೆಯಾಗಿದೆ. ಇದರ ಬಗ್ಗೆ ಚರ್ಚೆಯಾಗಲೇ ಬೇಕು” ಎಂದಿದ್ದಾರೆ.
ಮುಸ್ಲಿಮರು “ಭಯಭೀತರಾಗಿದ್ದಾರೆ” ಎಂಬ ಮನಸ್ಥಿತಿ ಯಾಕೆ ಅಸ್ತಿತ್ವದಲ್ಲಿದೆ ಎಂಬುದು ಒಂದು ದೊಡ್ಡ ಪ್ರಶ್ನೆ ಎಂದಿದ್ದಾರೆ.
“ವಸುದೈವ ಕುಟುಂಬಕಂ” (ಇಡೀ ಜಗತ್ತು ಒಂದೇ ಕುಟುಂಬ) ಮತ್ತು ‘ಸರ್ವೇ ಭವಂತು ಸುಖಿನಃ:’ (ಎಲ್ಲರೂ ಸಂತೋಷವಾಗಿರಬೇಕು) ಎಂಬ ತತ್ವಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಂಡಿಲ್ಲ ” ಎಂದಿರುವ ಅವರು, ಪಾಕಿಸ್ಥಾನ ಕೂಡ ಸಮೃದ್ಧಿಯನ್ನು ಕಾಣಬೇಕು ಎಂಬುದು ನನ್ನ ಆಶಯವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.