ನವದೆಹಲಿ: ಜಾರ್ಖಾಂಡಿನ ಸಾಹಿಬ್ಗಂಜ್ನಲ್ಲಿ ಗಂಗಾ ನದಿ ಮೇಲೆ ನಿರ್ಮಾಣಗೊಂಡಿರುವ ಎರಡನೇ ಮಲ್ಟಿ ಮಾಡೆಲ್ ಟರ್ಮಿನಲ್ ಅನ್ನು ಇಂದು (ಸೆ. 12) ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಕೇವಲ 2 ವರ್ಷದೊಳಗೆ ದಾಖಲೆಯ ಅವಧಿಯಲ್ಲಿ ಈ ಟರ್ಮಿನಲ್ ಅನ್ನು ನಿರ್ಮಾಣ ಮಾಡಿರುವುದು ವಿಶೇಷ.
ಈ ಯೋಜನೆಯು ರಾಷ್ಟ್ರದ ಒಳನಾಡಿನ ಜಲಮಾರ್ಗಗಳಿಗೆ ಅಭೂತಪೂರ್ವ ಉತ್ತೇಜನವನ್ನು ನೀಡಲಿದೆ ಮತ್ತು ರಾಷ್ಟ್ರದ ಪೂರ್ವ ಪ್ರದೇಶಗಳಲ್ಲಿನ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ. 290 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೇವಲ 2 ವರ್ಷಗಳ ದಾಖಲೆ ಸಮಯದಲ್ಲಿ ಇದನ್ನು ನಿರ್ಮಿಸಲಾಗಿದೆ.
ಪ್ರಧಾನಿ ಮೋದಿ ಈ ಹಿಂದೆ ರಾಷ್ಟ್ರದ ಮೊದಲ ಮಲ್ಟಿ-ಮಾಡೆಲ್ ಹಬ್ ಅನ್ನು 2018 ರ ನವೆಂಬರ್ನಲ್ಲಿ ವಾರಣಾಸಿಯಲ್ಲಿ ಉದ್ಘಾಟಿಸಿದ್ದರು.
ಸಾಹಿಬ್ಗಂಜ್ನಲ್ಲಿ ರಸ್ತೆ-ರೈಲು-ನದಿ ಸಾರಿಗೆಯ ಸಂಯೋಜನೆಯು ಜಾರ್ಖಂಡ್ ಅನ್ನು ಕೋಲ್ಕತ್ತಾದ ಹಲ್ಡಿಯಾ ಬಂದರಿಗೆ ಮತ್ತು ಬಂಗಾಳಕೊಲ್ಲಿಗೆ ಸಂಪರ್ಕಿಸುತ್ತದೆ. ಇದಲ್ಲದೇ, ನದಿ-ಸಮುದ್ರ ಮಾರ್ಗವಾಗಿ ಬಾಂಗ್ಲಾದೇಶದ ಮೂಲಕ ಈಶಾನ್ಯ ರಾಜ್ಯಗಳೊಂದಿಗಿನ ಜಾರ್ಖಂಡ್ ಸಂಪರ್ಕವು ಈಗ ವಾಸ್ತವವಾಗಿದೆ.
ಯೋಜನೆಯ ಮೊದಲ ಹಂತ ಪೂರ್ಣಗೊಂಡ ನಂತರ, ಟರ್ಮಿನಲ್ ವಾರ್ಷಿಕವಾಗಿ 30 ಲಕ್ಷ ಟನ್ ಸರಕುಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ರೂ.360 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಹಂತ ಕಾರ್ಯಾರಂಭವಾದ ನಂತರ ಈ ಸಾಮರ್ಥ್ಯ ವರ್ಷಕ್ಕೆ 54.8 ಲಕ್ಷ ಟನ್ಗಳಿಗೆ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.