ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರು ಈ ಬಾರಿಯ ‘ಯುವ ದಸರಾ-2019’ ಅನ್ನು ಉದ್ಘಾಟನೆಗೊಳಿಸಲಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಸಿಂಧು ಅವರಿಗೆ ಆಹ್ವಾನವನ್ನು ನೀಡಿದ್ದಾರೆ.
“ಕ್ರೀಡಾ ತಾರೆಯಾಗಿ ನೀವು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದೀರ ಮತ್ತು ಕ್ರೀಡಾ ಜಗತ್ತಿನಲ್ಲಿ ಭಾರತಕ್ಕೆ ಸ್ಥಾನ ಸಿಗುವಂತೆ ಮಾಡಿದ್ದೀರ. ನಿಮ್ಮ ಸಾಧನೆ ಸರಿಗಟ್ಟಲಾಗದ್ದು ಮತ್ತು ಅನೇಕ ಯುವಕರಿಗೆ ತಮ್ಮ ಗುರಿಯನ್ನು ತಲುಪಲು ಪ್ರರೇಣೆ ನೀಡುವಂತದ್ದು. ನೀವು ಅನೇಕರಿಗೆ ಮಾದರಿಯಾಗಿದ್ದೀರಿ. ಹೀಗಾಗಿ ನಿಮ್ಮ ಸಾಧನೆಗೆ ಗೌರವವನ್ನು ತೋರ್ಪಡಿಸಲು ನಮಗೆ ಹೆಮ್ಮೆಯಾಗುತ್ತದೆ ಮತ್ತು ನಿಮ್ಮ ಉಪಸ್ಥಿತಿ ಕಾರ್ಯಕ್ರಮಕ್ಕೆ ಶೋಭೆ ತರುತ್ತದೆ. ಅಕ್ಟೋಬರ್ 1ರಂದು ‘ಯುವ ದಸರಾ-2109’ ಅನ್ನು ಉದ್ಘಾಟಿಸಲು ನಿಮ್ಮನ್ನು ತಾರಾ ಅತಿಥಿಯಾಗಿ ಆಹ್ವಾನಿಸಲು ಹೆಮ್ಮೆಪಡುತ್ತೇವೆ”ಎಂದು ಸಿಂಧು ಅವರಿಗೆ ಬರೆದ ಪತ್ರದಲ್ಲಿ ಸಿಎಂ ಉಲ್ಲೇಖ ಮಾಡಿದ್ದಾರೆ.
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಿ.ವಿ ಸಿಂಧು ಅವರು ಪಾತ್ರರಾಗಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾವು ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿದೆ. ಈ ವೇಳೆ ಯುವ ದಸರಾ ಕೂಡ ಜರುಗಲಿದ್ದು, ಆ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಯುವ ಜನತೆಯನ್ನು ಕೇಂದ್ರೀಕರಿಸಿ ನಡೆಸುವ ದಸರಾ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.