ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನಿಲ್ ಅಂಬೇಕರ್ ಬರೆದ “ದಿ ಆರ್ಎಸ್ಎಸ್: ರೋಡ್ಮ್ಯಾಪ್ಸ್ ಫಾರ್ ದಿ 21st ಸೆಂಚುರಿ” ಪುಸ್ತಕವನ್ನು ಅಕ್ಟೋಬರ್ 1ರಂದು ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬಿಡುಗಡೆಗೊಳಿಸಲಿದ್ದಾರೆ.
ಈ ಪುಸ್ತಕವು ಭಾರತದ ಭವಿಷ್ಯ, ಅಂತರ್-ನಂಬಿಕೆಯ ಸಮೀಕರಣಗಳು, ಜಾತಿ ರಾಜಕೀಯ ಮತ್ತು ಎಲ್ಜಿಬಿಟಿಕ್ಯು ಜನರ ಹಕ್ಕುಗಳ ಬಗ್ಗೆ ಚರ್ಚಿಸಿದೆ. ಆರ್ಎಸ್ಎಸ್ ಕಾರ್ಯವೈಖರಿ ಮತ್ತು ಅದರ ಭವಿಷ್ಯದ ದೃಷ್ಟಿಕೋನಗಳ ಬಗ್ಗೆ, ಜನರನ್ನು ತಲುಪುವ ಬಗೆಯ ಬಗ್ಗೆ ವಿವರಿಸಿದೆ ಎಂದು ಪುಸ್ತಕದ ಪ್ರಕಾಶಕರಾದ ರೂಪಾ ಪಬ್ಲಿಕೇಶನ್ಸ್ ಮಂಗಳವಾರ ಹೇಳಿದೆ.
“ಹಲವಾರು ಪುಸ್ತಕಗಳು ಆರ್ಎಸ್ಎಸ್ ಪಯಣದ ಬಗ್ಗೆ ವಿಶ್ಲೇಷಣೆಗಳನ್ನು ನಡೆಸಿದರೂ ಕೂಡ ಆರ್ಎಸ್ಎಸ್ ಹೆಡ್ಲೈನ್ ಸೃಷ್ಟಿಸುವುದನ್ನು ಮುಂದುವರೆಸಿಯೇ ಇದೆ. ಅದರ ಸ್ವಯಂಸೇವಕರು ಸರ್ಕಾರದ ಉನ್ನತ ಸ್ಥಾನಗಳಿಗೆ ಏರುತ್ತಿರುವುದರಿಂದ ಆರ್ಎಸ್ಎಸ್ನ ಕಾರ್ಯವೈಖರಿಯ ಬಗ್ಗೆ ಕುತೂಹಲ ಇನ್ನೂ ಹೆಚ್ಚಾಗಿದೆ ಮತ್ತು ಸಂಘದ ಹಿಂದೂ ರಾಷ್ಟ್ರ ಮತ್ತು ಏಕತ್ಮಾತೆಯ ಪ್ರಮುಖ ವಿಚಾರಗಳು ನಮ್ಮ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ಮುಖ್ಯವಾಹಿನಿಯ ನಿಘಂಟಾಗಿ ಮಾರ್ಪಟ್ಟಿವೆ ”ಎಂದು ಪುಸ್ತಕ ಪ್ರಕಾಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪುಸ್ತಕವು “ಆರ್ಎಸ್ಎಸ್ನ ಭಾರತದ ಕಲ್ಪನೆ, ಒಂದು ವೇಳೆ ಭಾರತ ಹಿಂದೂ ರಾಷ್ಟ್ರವಾದರೆ ಇಸ್ಲಾಂ ಧರ್ಮದ ಮತ್ತು ಇತರ ನಂಬಿಕೆಗಳು ಪಡೆಯುವ ಜಾಗ, ಆರ್ಎಸ್ಎಸ್ ಇತಿಹಾಸ ಬರವಣಿಗೆಯ ಯೋಜನೆ ಮತ್ತು ಕುಟುಂಬದ ಬದಲಾಗುತ್ತಿರುವ ಸನ್ನಿವೇಶಕ್ಕೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳು” ಮುಂತಾದ ವಿಷಯಗಳನ್ನು ವಿಶ್ಲೇಷಿಸುತ್ತದೆ ಎಂದಿದ್ದಾರೆ.
ಸಂಘದ ಆಂತರಿಕ ಕಾರ್ಯ, ಅದರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ, ಸಮನ್ವಯ ವ್ಯವಸ್ಥೆ ಮತ್ತು ಅದರ ವಿಸ್ತರಣೆಯ ವಿಧಾನಗಳನ್ನೂ ಅಂಬೇಕರ್ ಪುಸ್ತಕದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.