ಶ್ರೀನಗರ: ಭಾರತೀಯ ಸೇನೆಯು ಸೋಮವಾರ ಭರ್ಜರಿಯಾಗಿ ಉಗ್ರ ವಿರೋಧಿ ಚಟುವಟಿಕೆ ಹಮ್ಮಿಕೊಂಡಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದೊಳಗಿನ ಪಾಕಿಸ್ಥಾನದ ನೆಲೆ ಮತ್ತು ಉಗ್ರರ ಲಾಂಚ್ ಪ್ಯಾಡ್ಗಳನ್ನು ಧ್ವಂಸಗೊಳಿಸಿದೆ.
ಲೀಪಾ ವ್ಯಾಲಿಯಲ್ಲಿ ಉಗ್ರರ ಲಾಂಚ್ ಪ್ಯಾಡ್ಗಳು ಇದ್ದವು. ಭಾರತೀಯ ಸೇನೆಯು ಪಾಕಿಸ್ಥಾನದ ಸೇನಾ ನೆಲೆಗಳ ಸಮೀಪವಿದ್ದ ಲಾಂಚ್ ಪ್ಯಾಡ್ಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ಥಾನ ಸೇನೆಯು ಈ ನೆಲೆಗಳನ್ನು ಬಳಸಿಕೊಂಡು ಭಾರತೀಯ ಗ್ರಾಮಗಳನ್ನು ಟಾರ್ಗೆಟ್ ಮಾಡಿಕೊಂಡು, ಉಗ್ರರನ್ನು ಒಳನುಸುಳಿಸುವ ಕಾರ್ಯ ನಡೆಸುತ್ತಿತ್ತು ಎನ್ನಲಾಗಿದೆ.
ಪಾಕಿಸ್ಥಾನ ಸೇನೆಯು ಇತ್ತೀಚಿನ ದಿನಗಳಲ್ಲಿ ಹೊಸ ಮತ್ತು ಚಲನಶೀಲ ತರಬೇತಿ ಕೇಂದ್ರಗಳನ್ನು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಾದ್ಯಂತ ಸ್ಥಾಪನೆ ಮಾಡಿದೆ ಎಂದು ವರದಿಗಳು ಹೇಳಿವೆ. ಪಾಕಿಸ್ಥಾನದ ನಟೋರಿಯಸ್ ಉಗ್ರ ಸಂಘಟನೆಯಾದ ಜಮಾತ್ ಇ ಇಸ್ಲಾಮಿ ರಾವಲ್ ಕೋಟಿನ ಉಗ್ರ ತರಬೇತಿ ಶಿಬಿರವನ್ನು ಮುನ್ನಡೆಸುತ್ತಿದೆ ಎನ್ನಲಾಗಿದೆ.
ಗುಪ್ತಚರ ಮಾಹಿತಿಯ ಪ್ರಕಾರ, ಜೈಶೇ ಇ ಮೊಹಮದ್, ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಇ ತೊಯ್ಬಾದ ಅಂತಹ ಅನೇಕ ಉಗ್ರ ಸಂಘಟನೆಗಳು ಪಾಕಿಸ್ಥಾನ ಸೇನೆಗೆ ಸಹಾಯ ಮಾಡುವ ಸಲುವಾಗಿ ಮಸ್ತು ಪಾಕಿಸ್ಥಾನ ಸೇನೆಯ ಸಹಾಯದೊಂದಿಗೆ ಉಗ್ರ ಶಿಬಿರ ಕೇಂದ್ರಗಳನ್ನು ಪಿಒಕೆಯಲ್ಲಿ ನಡೆಸುತ್ತಿವೆ. ವಾಸ್ತವ ಗಡಿ ರೇಖೆಯನ್ನು ದಾಟಿ ಭಾರತದೊಳಗೆ ಪ್ರವೇಶಿಸಲು ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗಲು ಇಲ್ಲಿ ಉಗ್ರರಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.