ಗುವಾಹಟಿ: ಅಕ್ರಮ ವಲಸಿಗರನ್ನು ಅಸ್ಸಾಂನಲ್ಲಿ ಯಾವುದೇ ಕಾರಣಕ್ಕೂ ನೆಲೆಸಲು ಬಿಡುವುದಿಲ್ಲ ಮತ್ತು ಇತರ ಯಾವುದೇ ರಾಜ್ಯಗಳ ಒಳಗೆ ನುಸುಳಲು ಬಿಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ತೆರಳಿರುವ ಅಮಿತ್ ಶಾ ಅವರು ಇಂದು ಬಿಜೆಪಿ ನೇತೃತ್ವದ ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್ ಸಭೆಯನ್ನು ನಡೆಸಿದರು. ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯು ಕಳೆದ ತಿಂಗಳು ಅಸ್ಸಾಂನಲ್ಲಿ ಬಿಡುಗಡೆಯಾದ ಬಳಿಕ ನಡೆಯುತ್ತಿರುವ ಮೊದಲ ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್ ಸಭೆ ಇದಾಗಿದೆ.
ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಲ್ಲಿ ಅಲ್ಲಿ ವಾಸಿಸುತ್ತಿರುವ 19 ಲಕ್ಷ ಜನರ ಹೆಸರು ತಮ್ಮ ಪೌರತ್ವವನ್ನು ಸಮರ್ಥಿಸಿಕೊಳ್ಳಲು ಇವರು ವಿದೇಶಿ ನ್ಯಾಯಮಂಡಳಿಗೆ ಮೊರೆ ಹೋಗಬೇಕಾಗಿದೆ.
ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಸಲುವಾಗಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಅಸ್ಸಾನಾದ್ಯಂತ ನಡೆಸಲಾಗಿತ್ತು.
ಈಶಾನ್ಯ ಭಾಗದ ತಮ್ಮ ಮೈತ್ರಿಗಳಿಗೆ ಭರವಸೆ ನೀಡಿರುವ ಅಮಿತ್ ಶಾ ಅವರು, ಯಾವುದೇ ಕಾರಣಕ್ಕೂ ಅಸ್ಸಾಂ ಸೇರಿದಂತೆ ಇತರ ರಾಜ್ಯಗಳಲ್ಲಿ ಅಕ್ರಮ ವಲಸಿಗರಿಗೆ ನೆಲೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.