ಲೇಹ್ : 1971 ರಲ್ಲಿ ಪಾಕಿಸ್ಥಾನದಿಂದ ವಶಪಡಿಸಿಕೊಂಡ ಜೀಪ್ ಈಗ ಲೇಹ್ನಲ್ಲಿನ ಭಾರತೀಯ ಸೇನಾ ಶಿಬಿರದ ‘ವಾರ್ ಟ್ರೋಫಿ’ಯಾಗಿದೆ. ಮಾತ್ರವಲ್ಲ ಭಾರತೀಯ ಸೇನೆಯ ಪರಾಕ್ರಮದ ಸಂಕೇತವಾಗಿ ದೇಶವ್ಯಾಪಿ ಸಂಚರಿಸಲಿದೆ.
‘ಕ್ವೀನ್’ ಹೆಸರಿಡಲಾದ ಜೀಪ್ ಪಾಕಿಸ್ಥಾನ ವಿರುದ್ಧದ ಭಾರತೀಯರ ದಿಗ್ವಿಜಯದ ಸಂಕೇತವಾಗಿದೆ.
ಅತ್ಯಂತ ಹೊಳಪು ಮತ್ತು ಘನತೆಯನ್ನು ಹೊಂದಿರುವ ಈ ಜೀಪ್ ಇದೀಗ ಲೇಹ್ನಿಂದ 40ಕಿಮೀ ದೂರದಲ್ಲಿರುವ 3 ಗ್ರೆನೇಡಿಯರ್ ರೆಜಿಮೆಂಟ್ನಲ್ಲಿ ‘ವಾರ್ ಟ್ರೋಫಿ’ಯಾಗಿ ಸೇರ್ಪಡೆಗೊಂಡಿದೆ.
ಈ ಜೀಪಿನ ಬದಿಗಳಲ್ಲಿ ಉರ್ದು ಅಕ್ಷರಗಳಿವೆ. 1971 ಯುದ್ಧದಲ್ಲಿ ಇದನ್ನು ಭಾರತವು ಪಾಕಿಸ್ಥಾನದಿಂದ ‘ವಾರ್ ಟ್ರೋಫಿ’ಯಾಗಿ ವಶಪಡಿಸಿಕೊಂಡಿದೆ.
ಇದು ಅಮೆರಿಕ ಮೂಲದ ಜೀಪ್ ಆಗಿದ್ದು, 50 ವರ್ಷಗಳ ಬಳಿಕವೂ ಇದು ಅತ್ಯುತ್ತಮ ವಾಹನವಾಗಿ ಓಡುತ್ತಿದೆ.
“ಈ ಜೀಪನ್ನು ನಾವು ಜಾರ್ಪಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ಥಾನದಿಂದ ವಶಪಡಿಸಿಕೊಂಡೆವು. ಪಾಕ್ನ ತನ್ನ ದಾಳಿಯ ಭಾಗವಾಗಿ ಇದನ್ನು ಬಳಕೆ ಮಾಡಿತ್ತು. ಇದಕ್ಕೆ ಜರ್ಪಲ್ ಕ್ವೀನ್ ಎಂದು ಹೆಸರಿಸಲಾಗಿತ್ತು. ಈ ಯುದ್ಧದಿಂದ ಭಾರತ ಎರಡು ಪರಮ್ ವೀರ ಚಕ್ರ ಪಡೆಯಿತು ಎಂದು ಕರ್ನಲ್ ಜೆ ಎಸ್ ಧಿಲ್ಲಾನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.