ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)) ತನ್ನ ಟಾರ್ಗೆಟ್ಗಿಂತ ಏಳು ತಿಂಗಳು ಮುಂಚಿತವಾಗಿ ಎಂಟು ಕೋಟಿ ಅನಿಲ ಸಂಪರ್ಕದ ಗುರಿಯನ್ನು ತಲುಪಿ ದಾಖಲೆ ಬರೆದಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಔರಂಗಾಬಾದ್ನ ಸೆಂದ್ರಾದಲ್ಲಿ 8 ಕೋಟಿ ಗುರಿಯ ಕೊನೆಯ ಅನಿಲ ಸಂಪರ್ಕವನ್ನು ಹಸ್ತಾಂತರಿಸಲಿದ್ದಾರೆ.
ದೇಶದ ಬಡ ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕವನ್ನು ಒದಗಿಸುವ ಸಲುವಾಗಿ ಈ ಯೋಜನೆಯನ್ನು ಸುಮಾರು ಮೂರು ವರ್ಷಗಳ ಹಿಂದೆ 2016 ರ ಮೇ 1 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪ್ರಾರಂಭಿಸಲಾಯಿತು. ಎಲ್ಪಿಜಿಯ ಬಳಕೆಯು ಮಹಿಳೆಯರ ಮತ್ತು ಮಕ್ಕಳ ಆರೋಗ್ಯ, ಪರಿಸರದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತಿದೆ. ಮಾತ್ರವಲ್ಲದೇ ಮಹಿಳೆಯರ ಆರ್ಥಿಕ ಉತ್ಪಾದಕತೆಯನ್ನು ಸುಧಾರಣೆಗೊಳಿಸುತ್ತಿದೆ. ಅನಾರೋಗ್ಯಕರ ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಕಟ್ಟಿಗೆ, ಬೆರಣಿ ಇತ್ಯಾದಿಗಳಿಂದ ಮಹಿಳೆಯರಿಗೆ ಮುಕ್ತಿಯನ್ನು ನೀಡುತ್ತಿದೆ.
ಈ ಯೋಜನೆಯನ್ನು ಮೂರು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಯನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಿಷನ್ ಮೋಡ್ನಲ್ಲಿ ಜಾರಿಗೆ ತರಲಾಗಿದೆ. ಮಾರ್ಚ್ 2020 ರ ಟೈಮ್ಲೈನ್ಗಿಂತ ಏಳು ತಿಂಗಳು ಮುಂಚಿತವಾಗಿ 8 ಕೋಟಿ ಸಂಪರ್ಕಗಳ ಗುರಿಯನ್ನು ಈ ಯೋಜನೆಯ ಮೂಲಕ ಸಾಧಿಸಲಾಗಿದೆ.
ಯೋಜನೆಯ ಗರಿಷ್ಠ ಫಲಾನುಭವಿ ರಾಜ್ಯವೆಂದರೆ ಉತ್ತರ ಪ್ರದೇಶ, ಇಲ್ಲಿ 1.46 ಕೋಟಿ ಅಡುಗೆ ಅನಿಲ ಸಂಪರ್ಕವನ್ನು ನೀಡಲಾಗಿದೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಇದ್ದು, ಇಲ್ಲಿ 88 ಲಕ್ಷ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ. ಬಿಹಾರದಲ್ಲಿ 85 ಲಕ್ಷ, ಮಧ್ಯಪ್ರದೇಶದಲ್ಲಿ 71 ಲಕ್ಷ ಮತ್ತು ರಾಜಸ್ಥಾನದಲ್ಲಿ 63 ಲಕ್ಷ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ. ಈ ರಾಜ್ಯಗಳಲ್ಲಿ ಶೇ 40 ರಷ್ಟು ಫಲಾನುಭವಿಗಳು ಎಸ್ಸಿ-ಎಸ್ಟಿ ವರ್ಗಗಳಿಗೆ ಸೇರಿದವರು ಎಂಬುದು ವಿಶೇಷ.
ಔರಂಗಬಾದಿನಲ್ಲಿ ಭಾರತದ ಮೊದಲ ಇಂಡಸ್ಟ್ರಿಯಲ್ ಇಂಟಿಗ್ರೇಟೆಡ್ ಸ್ಮಾರ್ಟ್ ಸಿಟಿಯನ್ನೂ ಇಂದು ಪ್ರಧಾನಿ ಮೋದಿ ಉದ್ಘಾಟನೆಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.