ಬೆಂಗಳೂರು: ಕೋಟ್ಯಾಂತರ ಭಾರತೀಯರು ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-2 ಯೋಜನೆಗೆ ಹಿನ್ನಡೆಯಾಗಿದೆ. ಆರ್ಬಿಟರ್ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಚಂದ್ರನ ದಕ್ಷಿಣ ಧ್ರುವವನ್ನು ಸಂಶೋಧನೆ ಮಾಡಲು ಹಿನ್ನಡೆಯಾದಂತಾಗಿದೆ. ಭಾರತ ವಿಜ್ಞಾನಿಗಳು ಮಾಡಿದ ಈ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿದೆ.
ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿತವಾಗಿದ್ದು ವಿಜ್ಞಾನಿಗಳಿಗೆ ದೊಡ್ಡ ಮಟ್ಟದಲ್ಲಿ ನಿರಾಸೆಯನ್ನು ಉಂಟು ಮಾಡಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳ ಜೊತೆ ದೃಢವಾಗಿ ನಿಂತು ಅವರಿಗೆ ಭರವಸೆ, ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಮಾಡಿದ್ದಾರೆ. ಇಡೀ ದೇಶವೇ ನಿಮ್ಮೊಂದಿಗಿದೆ, ಧೃತಿಗೆಡಬೇಡಿ ಪ್ರಯತ್ನ ಮುಂದುವರೆಸಿ ಎಂದಿದ್ದಾರೆ.
ಅದರಲ್ಲೂ ಇಂದು ಬೆಳಿಗ್ಗೆ ಮೋದಿಯವರು ಇಸ್ರೋ ಕೇಂದ್ರದಿಂದ ಹೊರಡುವ ವೇಳೆ ಇಸ್ರೋ ಅಧ್ಯಕ್ಷ ಕೆ.ಸಿವನ್ ಅವರು ಭಾವುಕರಾಗಿದ್ದು, ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ಮೋದಿ ಅವರನ್ನು ತಬ್ಬಿಕೊಂಡು ಸಂತೈಸಿದ್ದರು. ಬೆನ್ನುತಟ್ಟಿ ಸಾಂತ್ವನದೊಂದಿಗೆ ಧೈರ್ಯ ಹೇಳಿದರು. ಈ ದೃಶ್ಯ ಅತ್ಯಂತ ಭಾವುಕವಾಗಿತ್ತು ಮತ್ತು ಇಡೀ ದೇಶವನ್ನೇ ಒಂದು ಕ್ಷಣ ಭಾವುಕವಾಗುವಂತೆ ಮಾಡಿತ್ತು.
ದೇಶದ ಪ್ರಧಾನಿಯಾಗಿ ಇಡೀ ರಾತ್ರಿ ವಿಜ್ಞಾನಿಗಳ ಜೊತೆ ನಿಂತು ಅವರಿಗೆ ಆತ್ಮಸ್ಥೈರ್ಯವನ್ನು ತುಂಬಿದರು ಮೋದಿ. ಅವರ ಈ ಕಾರ್ಯಕ್ಕೆ ಇಡೀ ದೇಶವೇ ಭೇಷ್ ಎಂದಿದೆ.
#WATCH PM Narendra Modi hugged and consoled ISRO Chief K Sivan after he(Sivan) broke down. #Chandrayaan2 pic.twitter.com/bytNChtqNK
— ANI (@ANI) September 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.