ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ವಿಷಯದಲ್ಲಿ ಸಾರ್ವಜನಿಕರ ಬೆಂಬಲವನ್ನು ಪಡೆಯಲು ಬಿಜೆಪಿಯು ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದೆ. 370ನೇ ವಿಧಿ ರದ್ಧತಿಯ ಬಗೆಗಿನ ಬಿಜೆಪಿಯ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ 10 ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ.
ಬಿಜೆಪಿ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬುಧವಾರ ಸಂಜೆ ಈ ಕಿರುಚಿತ್ರವನ್ನು ಬಿಡುಗಡೆ ಮಾಡಿದರು. ಕಿರುಚಿತ್ರ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಲಭ್ಯವಿದೆ. ದೇಶವ್ಯಾಪಿಯಾಗಿ ಇದನ್ನು ಬಿಡುಗಡೆ ಮಾಡಲಾಗಿದೆ.
370ನೇ ವಿಧಿ ರದ್ಧತಿಯ ಬಗ್ಗೆ ಬಿಜೆಪಿ ತನ್ನ ದೀರ್ಘಕಾಲದ ಅಭಿಪ್ರಾಯಗಳನ್ನು ಎತ್ತಿ ಹಿಡಿಯಲು ಚಿತ್ರದ ಮೂಲಕ ಪ್ರಯತ್ನಿಸಿದೆ. “ಐತಿಹಾಸಿಕ ಪ್ರಮಾದ” ಎಂದು 370ನೇ ವಿಧಿಯನ್ನು ಪಕ್ಷ ಕರೆದಿದ್ದು, ಈ ವಿಧಿ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯ ವಿರುದ್ಧ ಕೆಲಸ ಮಾಡಿದೆ ಮತ್ತು ಕಣಿವೆಯಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಿದೆ ಎಂದು ಟ್ವಿಟರಿನಲ್ಲಿ ಬಿಜೆಪಿ ಹೇಳಿದೆ.
एक ऐतिहासिक भूल की वजह से 70 साल तक जम्मू-कश्मीर की धरा रक्तिम होती रही।
लाखों नागरिक अपने अधिकारों से वंचित रहे, बच्चों को पत्थर थमाए जाते रहे।
मोदी सरकार के दृ़ढ़ निश्चय से अब भारत में दो विधान, दो प्रधान और दो निशान का प्रावधान हमेशा के लिए खत्म हो चुका है।
एक लघु फिल्म। pic.twitter.com/2KTqZpUF7L
— BJP (@BJP4India) September 4, 2019
“70 ವರ್ಷಗಳ ಕಾಲ ಕಾಶ್ಮೀರವನ್ನು ರಕ್ತಪಾತದಲ್ಲಿ ಮುಳುಗಿಸಿದ ಐತಿಹಾಸಿಕ ಪ್ರಮಾದ. ಲಕ್ಷಾಂತರ ಜನರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದರು, ಮಕ್ಕಳ ಕೈಗೆ ಕಲ್ಲುಗಳನ್ನು ನೀಡಲಾಯಿತು. ಮೋದಿ ಸರ್ಕಾರದ ಕಠಿಣ ನಿರ್ಧಾರದಿಂದ, ಎರಡು ಸಂವಿಧಾನ, ಎರಡು ಧ್ವಜಗಳ ಪರಿಕಲ್ಪನೆಗೆ ಈಗ ಮುಕ್ತಾಯ ಸಿಕ್ಕಿದೆ” ಎಂದು ಬಿಜೆಪಿಯು ಟ್ವೀಟ್ ಮಾಡಿದೆ.
ಈ ಕಿರು ಚಿತ್ರವು ಕಾಶ್ಮೀರ ಸಮಸ್ಯೆಗೆ ಕಾಂಗ್ರೆಸ್ ನಾಯಕ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಕಾರಣ ಎಂದು ದೂಷಿಸಿದೆ. ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಅವರು ಭಾರತದೊಂದಿಗೆ 500 ಕ್ಕೂ ಹೆಚ್ಚು ಸಂಸ್ಥಾನಗಳ ವಿಲೀನವನ್ನು ಯಶಸ್ವಿಯಾಗಿ ನಿರ್ವಹಿಸಿದರು, ಆದರೆ ಜಮ್ಮು ಮತ್ತು ಕಾಶ್ಮೀರದ ವಿಲೀನದ ಜವಾಬ್ದಾರಿಯನ್ನು ನೆಹರೂ ವಹಿಸಿಕೊಂಡಿದ್ದರು ಎಂದು ಅದು ಹೇಳಿದೆ. ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವುದು ನೆಹರೂ ಅವರ ಏಕಪಕ್ಷೀಯ ನಿರ್ಧಾರವಾಗಿತ್ತು ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.