ವ್ಲಾಡಿವೋಸ್ಟೋಕ್: ಪ್ರಧಾನಿ ನರೇಂದ್ರ ಮೋದಿಯವರು ಫೋಟೋ ಸೆಷನ್ ವೇಳೆ ತಮಗಾಗಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಸೋಫಾವನ್ನು ಬದಿಗಿರಿಸಿ ಎಲ್ಲರಂತೆ ಕುರ್ಚಿಯಲ್ಲಿ ಕುಳಿತುಕೊಂಡು ಫೋಸ್ ನೀಡಿದ್ದಾರೆ. ಈ ಮೂಲಕ ತನ್ನ ಸರಳ ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ.
ಮೋದಿಯವರನ್ನು ಫೋಟೋ ಸೆಷನ್ಗಾಗಿ ಅಧಿಕಾರಿಗಳು ಸ್ವಾಗತಿಸುತ್ತಾರೆ. ಅಲ್ಲಿ ಅವರಿಗಾಗಿ ಸೋಫಾ ಸಜ್ಜುಗೊಂಡಿರುತ್ತದೆ ಮತ್ತು ಇತರರಿಗೆ ಕುರ್ಚಿ ಇರುತ್ತದೆ. ಆದರೆ ಪ್ರಧಾನಿ ಮೋದಿ ಸೋಫಾದ ಬದಲು ಕುರ್ಚಿಯನ್ನು ಕುಳಿತುಕೊಳ್ಳಲು ಆಯ್ಕೆ ಮಾಡುತ್ತಾರೆ. ಆಗ ಅಲ್ಲಿದ್ದ ಅಧಿಕಾರಿಗಳು ತಕ್ಷಣವೇ ಸೋಫಾವನ್ನು ಬದಿಗೆ ಸರಿಸಿ ಕುರ್ಚಿಯನ್ನು ತಂದಿಟ್ಟರು.
PM @NarendraModi जी की सरलता का उदाहरण आज पुनः देखने को मिला, उन्होंने रूस में अपने लिए की गई विशेष व्यवस्था को हटवा कर अन्य लोगों के साथ सामान्य कुर्सी पर बैठने की इच्छा जाहिर की। pic.twitter.com/6Rn7eHid6N
— Piyush Goyal (@PiyushGoyal) September 5, 2019
“ಪ್ರಧಾನಿ ನರೇಂದ್ರ ಮೋದಿಯವರ ಸರಳತೆ ಇಂದು ಮತ್ತೆ ಅನಾವರಣಗೊಂಡಿದೆ. ರಷ್ಯಾದಲ್ಲಿ ತಮಗಾಗಿ ಮಾಡಲಾಗಿದ್ದ ವಿಶೇಷ ವ್ಯವಸ್ಥೆಯನ್ನು ಅವರು ನಿರಾಕರಿಸಿದರು ಮತ್ತು ಇತರರೊಂದಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ನಿರ್ಧರಿಸಿದರು” ಎಂದು ಗೋಯಲ್ ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ.
ಪ್ರಧಾನಿಯವರ ಸರಳತೆಯನ್ನು ಹಲವಾರು ಮಂದಿ ಟ್ವಿಟರಿನಲ್ಲಿ ಕೊಂಡಾಡಿದ್ದಾರೆ.
ಐದನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಳ್ಳಲು ಮತ್ತು 20 ನೇ ಭಾರತ-ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ವ್ಲಾಡಿವೋಸ್ಟಾಕ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು.
ಅವರು ಶುಕ್ರವಾರ ಮುಂಜಾನೆ ನವದೆಹಲಿಗೆ ಆಗಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.