ನವದೆಹಲಿ: ರಷ್ಯಾದ ಫಾರ್ ಈಸ್ಟ್ ರೀಜನ್ ಅಭಿವೃದ್ಧಿಗಾಗಿ $1 ಬಿಲಿಯನ್ ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಘೋಷಣೆ ಮಾಡಿದ್ದಾರೆ. ಇನ್ನೊಂದು ದೇಶದ ನಿರ್ದಿಷ್ಟ ಪ್ರದೇಶದ ಅಭಿವೃದ್ಧಿಗೆ ಭಾರತ ಸಾಲವನ್ನು ನೀಡುತ್ತಿರುವುದು ಇದೇ ಮೊದಲು.
ರಷ್ಯಾದ ವ್ಲಾಡಿವೋಸ್ಟಾಕ್ನಲ್ಲಿ ನಡೆದ ಐದನೇ ಪೂರ್ವ ಆರ್ಥಿಕ ವೇದಿಕೆಯ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನನ್ನ ಸರ್ಕಾರ ತನ್ನ ‘ಆ್ಯಕ್ಟ್ ಈಸ್ಟ್’ ನೀತಿಯ ಭಾಗವಾಗಿ ಪೂರ್ವ ಏಷ್ಯಾ ವಿಷಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದು ನಮ್ಮ ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮವನ್ನು ನೀಡುತ್ತದೆ” ಎಂದು ಪ್ರತಿಪಾದಿಸಿದರು.
ಭಾರತ ಮತ್ತು ರಷ್ಯಾದ ಫಾರ್ ಈಸ್ಟ್ ರೀಜನ್ ನಡುವಿನ ನಿಕಟ ಸಂಬಂಧವನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು, ಈ ಸಂಪರ್ಕವು ಯುಗದಿಂದಲೂ ಇದೆ ಎಂದರು. ಪೂರ್ವ ಆರ್ಥಿಕ ವೇದಿಕೆಯ ವಿವಿಧ ಚಟುವಟಿಕೆಗಳಲ್ಲಿ ಭಾರತವು ಹೆಮ್ಮೆಯಿಂದ ಮತ್ತು ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದೆ. ಸರ್ಕಾರ ಮತ್ತು ಉದ್ಯಮದ ಉನ್ನತ ಹಂತಗಳಿಂದಲೂ ಈ ಭಾಗವಹಿಸುವಿಕೆ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.
“ಈ ವೇದಿಕೆಯಲ್ಲಿ ಇಂದು ನಮ್ಮ ಉಪಸ್ಥಿತಿಯು ಫಾರ್ ಈಸ್ಟ್ನಲ್ಲಿ ಮಾನವ ಕಲ್ಯಾಣಕ್ಕಾಗಿ ಪ್ರಯತ್ನಗಳನ್ನು ಮಾಡುವುದು ಮಾತ್ರವಲ್ಲದೆ ಇಡೀ ಮಾನವಕುಲವನ್ನೂ ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.
ರಷ್ಯಾದ ಫಾರ್ ಈಸ್ಟ್ ಪೂರ್ವ ಸೈಬೀರಿಯಾ ಮತ್ತು ಪೆಸಿಫಿಕ್ ಸಾಗರದ ಬೈಕಾಲ್ ಸರೋವರದ ನಡುವಿನ ರಷ್ಯಾದ ಪೂರ್ವ ಪ್ರದೇಶವಾಗಿದೆ ಮತ್ತು ಇದು ಮಂಗೋಲಿಯಾದೊಂದಿಗೆ, ಚೀನಾ ಮತ್ತು ಕೊರಿಯಾಗಳೊಂದಿಗೆ ಭೂ ಗಡಿಯನ್ನು ಮತ್ತು ಅಮೆರಿಕಾ ಮತ್ತು ಜಪಾನ್ನೊಂದಿಗೆ ಕಡಲ ಗಡಿಯನ್ನು ಹಂಚಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.