ನವದೆಹಲಿ: ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ಎಂದು ಲೋಕಸಭಾ ಚುನಾವಣೆಯ ಸಂದರ್ಭವೇ ಕಾಂಗ್ರೆಸ್ ಭಯ ಹುಟ್ಟಿಸಿತ್ತು. ಈಗಲೂ ಅದು ಎನ್ಡಿಎ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸುತ್ತಲೇ ಇದೆ. ಆದರೆ ಇದಕ್ಕೆ ತದ್ವಿರುದ್ಧ ವರದಿಯೊಂದನ್ನು ಪತ್ರಿಕೆಯೊಂದು ಪ್ರಕಟಿಸಿದೆ.
ಯುಪಿಎಗಿಂತ ಎನ್ಡಿಎ ಸರ್ಕಾರವೇ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದೆ ಮತ್ತು ಅವರ ಬಗ್ಗೆ ಕಾಳಜಿ ತೋರುತ್ತಿದೆ ಎಂಬುದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಪ್ರಕಟಿಸಿರುವ ವರದಿಯಿಂದ ಸಾಬೀತಾಗಿದೆ.
ನರೇಂದ್ರ ಮೋದಿ ಸರ್ಕಾರ ಯುವ ಮುಸ್ಲಿಂ ಮಹಿಳೆಯರ ನಾಯಕತ್ವ ಉತ್ತೇಜನಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಯಿ ರೋಶ್ನಿ ಯೋಜನೆಯನ್ನು ಯುಪಿಎ ಆರಂಭಿಸಿತ್ತಾದರೂ ಎನ್ಡಿಎ ಇದಕ್ಕೆ 13.48 ಕೋಟಿ ರೂಪಾಯಿ ಬಿಡುಗಡೆ ಮಾಡಿ, 16,675 ಮಹಿಳೆಯರನ್ನು ಸಶಕ್ತಗೊಳಿಸಿದೆ. ಆದರೆ ಆದರೆ ಯುಪಿಎ ಕೇವಲ 10 ಕೋಟಿ ಬಿಡುಗಡೆ ಮಾಡಿ 36,950 ಮಹಿಳೆಯರಿಗೆ ಸಹಾಯ ಮಾಡಿದೆ ಎಂದು ವರದಿ ತಿಳಿಸಿದೆ.
ವಕ್ಫ್ ಮಂಡಳಿಯನ್ನು ಡಿಜಟಲೀಕರಣಗೊಳಿಸಲು ಎನ್ಡಿಎ 3 ಕೋಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ 2012-13ರವರೆಗೆ ಕೇವಲ 2.98 ಕೋಟಿ ಬಿಡುಗಡೆ ಮಾಡಿದೆ. ರಾಜ್ಯ ವಕ್ಫ್ ಮಂಡಳಿಗೆ ಯುಪಿಎ 2012-13ರಲ್ಲಿ ನಯಾ ಪೈಸೆ ವಿನಿಯೋಗಿಸಿಲ್ಲ, ಎನ್ಡಿಎ 3,712.78ಕೋಟಿ ಬಿಡುಗಡೆ ಮಾಡಿದೆ.
ಮದರಸಾಗಳ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಸರ್ಕಾರ ನಯಿ ಮಂಝಿಲ್ ಎಂಬ ಯೋಜನೆಯನ್ನು ಜಾರಿಗೊಳಿಸಿದೆ.
ಒಟ್ಟಿನಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮೋದಿ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂಬುದು ಈ ವರದಿಯಿಂದ ತಿಳಿದು ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.