ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೆ. 4 ರಂದು ರಷ್ಯಾಗೆ ಪ್ರಯಾಣಿಸಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ಹೈಡ್ರೋಕಾರ್ಬನ್ ಸಹಕಾರ ಮತ್ತು ರಷ್ಯಾದ ತೈಲ ಕ್ಷೇತ್ರಗಳಲ್ಲಿ ನವ ಭಾರತೀಯ ಹೂಡಿಕೆ ಕುರಿತ ಐದು ವರ್ಷಗಳ ಮಾರ್ಗಸೂಚಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸೋಮವಾರ ತಿಳಿಸಿದ್ದಾರೆ.
ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವಾರ್ಷಿಕ ಸಭೆ ನಡೆಸಲು ಮೋದಿ ಸೆಪ್ಟೆಂಬರ್ 4-5ರ ಅವಧಿಯಲ್ಲಿ ಫಾರ್ ಈಸ್ಟರ್ನ್ ಬಂದರು ನಗರ ವ್ಲಾಡಿವೋಸ್ಟಾಕ್ಗೆ ಪ್ರಯಾಣಿಸಲಿದ್ದಾರೆ. ಭಾರತ ತನ್ನ ಇಂಧನ ಸುರಕ್ಷತೆಗಾಗಿ, ತೈಲ ಮತ್ತು ಅನಿಲ ಪರಿಶೋಧನೆಗಾಗಿ ಯಾವುದೇ ದೇಶ ಅಥವಾ ಪ್ರದೇಶವನ್ನು ಅವಲಂಬಿಸದಿರುವ ಉದ್ದೇಶವನ್ನು ಹೊಂದಿರುವುದು ಈ ದ್ವಿಪಕ್ಷೀಯ ಚರ್ಚೆಗಳ ಪ್ರಮುಖ ಭಾಗವಾಗಲಿದೆ.
ಹೈಡ್ರೋಕಾರ್ಬನ್ ಸಹಕಾರದ ಮೇಲಿನ ಮಾರ್ಗಸೂಚಿಯು ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಾಧ್ಯತೆಗಳನ್ನು ತಿಳಿಸುತ್ತದೆ. “ಪರಿಶೋಧನೆ ಮತ್ತು ಬಳಕೆಯ ವಿಷಯದಲ್ಲಿ ಮತ್ತು ಖರೀದಿಯ ವಿಷಯದಲ್ಲಿ (2019-24ರ ಅವಧಿಯಲ್ಲಿ) ನಮ್ಮ ತೈಲ ಮತ್ತು ಅನಿಲ ಸರಬರಾಜುಗಳಿಗಾಗಿ ಕೊಲ್ಲಿ ರಾಷ್ಟ್ರಗಳನ್ನು ಸಂಪೂರ್ಣ ಅವಲಂಬಿಸುವುದನ್ನೂ ಮೀರಿ ಬೆಳೆಯಲು ನಾವು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಮಾತುಕತೆಗಳು ನಡೆಯುತ್ತಿವೆ” ಎಂದು ಗೋಖಲೆ ಹೇಳಿದ್ದಾರೆ.
ಭಾರತೀಯ ಸರ್ಕಾರಿ ಇಂಧನ ಸಂಸ್ಥೆಗಳು ರಷ್ಯಾದ ಆಯಿಲ್ಫೀಲ್ಡ್ ಕ್ಲಸ್ಟರ್ಗಳಲ್ಲಿ ಹೊಸ ಹೂಡಿಕೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಮತ್ತು ಎಲ್ಎನ್ಜಿ ಆಮದು ಕುರಿತು “ಕಾಂಕ್ರೀಟ್” ಪ್ರಸ್ತಾಪವನ್ನು ಮೋದಿಯ ಭೇಟಿಯ ಸಮಯದಲ್ಲಿ ಅಥವಾ ನಂತರ ಅನಾವರಣಗೊಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಕೋಲ್ ಇಂಡಿಯಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ತಮ್ಮ ರಷ್ಯಾದ ಸಹವರ್ತಿಗಳೊಂದಿಗೆ ಈ ಸಿದ್ಧತೆಗಳ ಬಗ್ಗೆ ಪ್ರಕಟಿಸುವ ನಿರೀಕ್ಷೆಯಿದೆ. ಚೆನ್ನೈ ಮತ್ತು ವ್ಲಾಡಿವೋಸ್ಟಾಕ್ ನಡುವೆ ಸಮುದ್ರ ಮಾರ್ಗವನ್ನು ತೆರೆಯುವ ಕುರಿತು ಚರ್ಚೆಗಳೂ ನಡೆಯಲಿವೆ. ನಾಗರಿಕ ಪರಮಾಣು ಮತ್ತು ರಕ್ಷಣಾ ಸಹಕಾರವನ್ನು ಮೀರಿ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಮೋದಿಯ ಬಯಕೆಯೊಂದಿಗೆ ಇಂಧನ ವಲಯಗಳಲ್ಲಿ ಹೆಚ್ಚಿನ ಸಹಕಾರವನ್ನು ಹೊಂದುವ ಬಗ್ಗೆ ನಿರೀಕ್ಷೆ ಇಡಲಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.