ಗುವಾಹಟಿ: ಭಾರೀ ಬಿಗಿ ಭದ್ರತೆಯ ನಡುವೆ ಶನಿವಾರ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯ ಅಂತಿಮ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿ ಸುಮಾರು 3.3 ಕೋಟಿ ಜನಸಂಖ್ಯೆಯನ್ನು ಒಳಗೊಂಡಿದೆ, 19 ಲಕ್ಷ ಜನರನ್ನು ಕೈಬಿಡಲಾಗಿದೆ.
ಎನ್ಆರ್ಸಿ ಟ್ವಿಟರ್ನಲ್ಲಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಂತಿಮ ಕರಡಿನಲ್ಲಿ 3,11,21,004 ಜನರನ್ನು ಸೇರಿಸಲಾಗಿದ್ದು, 19,06,657 ಜನರನ್ನು ಹೊರಗಿಡಲಾಗಿದೆ. ಹೊರಗುಳಿದ ಜನರು ಒಂದು ವರ್ಷದ ಹಿಂದೆ ಬಿಡುಗಡೆಯಾದ ಎನ್ಆರ್ಸಿ ಕರಡಿನಿಂದ ಹೊರಗಿಡುವುದರ ವಿರುದ್ಧ ಯಾವುದೇ ದೂರುಗಳನ್ನು ಸಲ್ಲಿಸುವಲ್ಲಿ ವಿಫಲರಾಗಿರುವವರಾಗಿದ್ದಾರೆ.
68 ವರ್ಷಗಳ ನಂತರ ಅಸ್ಸಾಂನಲ್ಲಿ ಪೌರತ್ವ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಸಲುವಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ನಾಗರಿಕ ಪಟ್ಟಿಗೆ ಸೇರ್ಪಡೆಗೊಳ್ಳಲು ಸುಮಾರು 3.29 ಕೋಟಿ ಜನರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಇವರ ಪೈಕಿ ಸುಮಾರು 19 ಲಕ್ಷ ಜನರು ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಪಟ್ಟಿಯಿಂದ ಹೊರಗುಳಿದ ಜನರು 120 ದಿನಗಳ ಒಳಗೆ ರಾಜ್ಯದಲ್ಲಿ ಸ್ಥಾಪಿಸಲಾದ ವಿದೇಶಿಯರ ನ್ಯಾಯಮಂಡಳಿಗಳಲ್ಲಿ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ. ಇಲ್ಲಿ ದಾಖಲಾದ ಪ್ರಕರಣಗಳನ್ನು ಆರು ತಿಂಗಳೊಳಗೆ ಮುಕ್ತಾಯಗೊಳಿಸುವುದು ಕಡ್ಡಾಯವಾಗಿದೆ. ನ್ಯಾಯಮಂಡಳಿಗಳ ತೀರ್ಪುಗಳಿಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಮಾಡಬಹುದಾಗಿದೆ.
ಅಂತಿಮ ಎನ್ಆರ್ಸಿ ಪಟ್ಟಿಯನ್ನು www.nrcassam.nic.in ಅಥವಾ www.assam.mygov.in ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇಲ್ಲಿ ಸೇರ್ಪಡೆಗೊಂಡಿರುವ ಅಥವಾ ಕೈಬಿಟ್ಟು ಹೋಗಿರುವ ಜನರ ಹೆಸರನ್ನು ನೋಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.